ಪ್ರಮುಖ ಸುದ್ದಿ

ಮದ್ಯದಂಗಡಿ ಸ್ಥಾಪನೆ ವಿರೋಧಿಸಿ ಪ್ರತಿಭಟನೆ

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಜು.೫: ಮದ್ಯದಂಗಡಿ ತೆರಯಬಾರದು ಎಂದು ಒತ್ತಾಯಿಸಿ ತಾಲೂಕಿನ ಹಂಗಳ ಗ್ರಾಮದ ಮಹಿಳೆಯರು, ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬುಧವಾರ ತಾಲೂಕು ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು ವಿವಿಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಪದ್ಯದಂಗಡಿ ಆರಂಭಿಸಲು ಉzಶಿಸಿರುವ ಪ್ರದೇಶದ ಬಳಿಯಲ್ಲಿ ಜನವಸತಿ ಹಾಗೂ ಶನೇಶ್ವರ ದೇವಸ್ಥಾನವಿದೆ. ಆದ್ದರಿಂದ ಇಲ್ಲಿ ಯಾವುದೇ ಕಾರಣಕ್ಕೂ ಬಾರ್ ಸ್ಥಾಪನೆ ಮಾಡಬಾರದು ಎಂದು ಒತ್ತಾಯಿಸಿದ ಹಂಗಳ ಗ್ರಾಮಸ್ಥರು ಅಬ್ಕಾರಿ, ಪೊಲೀಸ್, ತಾಲೂಕು ಕಚೇರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾರೂ ಈ ಬಗ್ಗೆ ಕ್ರಮ ಕೈಗೊಳ್ಳದ ಪರಿಣಾಮವಾಗಿ ಬಾರ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಕೂಡಲೇ ಕಾಮಗಾರಿ ನಿಲ್ಲಿಸುವಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿ ಧರಣಿ ನಡೆಸಿದರೂ ಗ್ರಾಮಸ್ಥರ ಮನವಿ ಕೇಳಲು ಯಾವುದೇ ಅಧಿಕಾರಿಯೂ ಮುಂದಾಗಿಲ್ಲ. ಇದರಿಂದ ಹೆದ್ದಾರಿ ತಡೆ ನಡೆಸಿ ಅಧಿಕಾರಿಗಳ ಗಮನ ಸೆಳೆಯಲು ಗ್ರಾಮಸ್ಥರು ಮುಂದಾಗಿದ್ದರೂ ಇದಕ್ಕೂ ಪೊಲೀಸರು ಅನುಮತಿ ನೀಡಿಲ್ಲ. ಆದ್ದರಿಂದ ಗ್ರಾಮಸ್ಥರ ಪರವಾಗಿ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದೆ. ಕೂಡಲೇ ಬಾರ್ ಸ್ಥಾಪನೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ನಂತರ ಶಿರಸ್ತೇದಾರ್‌ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವಮೊರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ನಂದೀಶ್, ಗ್ರಾಮಸ್ಥರಾದ ಶಿವಣ್ಣ, ಮಹದೇವೇಗೌಡ, ದೊರೆಸ್ವಾಮಿ, ಸಿದ್ದರಾಜು, ಉಷಾ, ಚಿಕ್ಕತಾಯಮ್ಮ, ಬಸವೇಗೌಡ, ಸಿದ್ದಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: