ಮೈಸೂರು

ಬೆಳವಾಡಿ ಗ್ರಾಮಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಲು ಸ್ಥಳ ಪರಿಶೀಲನೆ

ಮೈಸೂರು.ಜು.5:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಧ್ರುವಕುಮಾರ್ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬೆಳವಾಡಿ ಗ್ರಾಮಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಬೆಳವಾಡಿ ಗ್ರಾಮದ ಸ್ಮಶಾನಕ್ಕೆ ಕಾಂಪೌಂಡ್ ನಿರ್ಮಿಸಿ, ಬೋರ್‍ವೆಲ್ ಕೊರೆಸುವಂತೆ ಹಾಗೂ ಬೆಳವಾಡಿ ಗ್ರಾಮದ ದೇವಸ್ಥಾನದ ಸುತ್ತಲೂ ಡಾಂಬರೀಕರಣ ಕಾಮಗಾರಿಯನ್ನು ಪ್ರಾಧಿಕಾರದ ವತಿಯಿಂದ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಲಾಯಿತು ಹಾಗೂ ಹೂಟಗಳ್ಳಿ ಕೆ.ಹೆಚ್.ಬಿ ಬಡಾವಾಣೆಯ ಒಳಭಾಗದಲ್ಲಿನ ಓವಲ್ ಆಕಾರದ ಉದ್ಯಾನವನಕ್ಕೆ ಶಾರ್ಟ್ ಬೇಸ್‍ಮೆಂಟ್ ಮತ್ತು ಗ್ರೀಲ್ ಅಳವಡಿಸುವ ಕಾಮಗಾರಿಯನ್ನು ಪ್ರಾಧಿಕಾರದವತಿಯಿಂದ ಕೈಗೆತ್ತಿಕೊಳ್ಳಲಾಗುವುದೆಂದು ಈ ಸಂದರ್ಭ ತಿಳಿಸಿದರು.

ಪ್ರಾಧಿಕಾರದ ಆಯುಕ್ತ ಡಾ. ಎಂ.ಮಹೇಶ್ , ಅಧೀಕ್ಷಕ ಅಭಿಯಂತರ ಶಿವಕುಮಾರ್ , ಸಹಾಯಕ ಕಾರ್ಯಪಾಲಕ ಅಭಿಯಂತರ ಅರುಣ್ ಕುಮಾರ್ ಹಾಗೂ ಸಹಾಯಕ ಅಭಿಯಂತರರುಗಳು ಹಾಗೂ ತಾಲೂಕು ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

 

 

Leave a Reply

comments

Related Articles

error: