ಸುದ್ದಿ ಸಂಕ್ಷಿಪ್ತ

ಮೈಸೂರು ಜಿಲ್ಲಾಡಳಿತದಿಂದ ಉಚಿತ ಸಾಮೂಹಿಕ ಸರಳ ವಿವಾಹ

ಮೈಸೂರು, ಜುಲೈ 5 : ಜಿಲ್ಲಾಡಳಿತದ ವತಿಯಿಂದ ಆಗಸ್ಟ್ ಮಾಹೆಯ ಮೊದಲ ವಾರದಲ್ಲಿ ಚಾಮುಂಡಿಬೆಟ್ಟದಲ್ಲಿ ಸರಳ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದೆ.

ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಲು ಇಚ್ಫಿಸುವವರು (ಹಿಂದೂ, ಮುಸ್ಲಿಂ, ಕ್ರೈಸ್ತ, ಹಿಂದುಳಿದ ವರ್ಗದವರು ಹಾಗೂ ಅಂತರ್ಜಾತಿಯಲ್ಲಿ ವಿವಾಹವಾಗುವವರು) ಜುಲೈ 10 ರೊಳಗೆ ತಾಲ್ಲೂಕು ಪಂಚಾಯತ್ ಕಚೇರಿಯ ಕೊಠಡಿ ಸಂಖ್ಯೆ 105ರಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸುವಂತೆ ಮೈಸೂರು ತಾಲ್ಲೂಕು ತಹಶೀಲ್ದಾರ್ ಟಿ. ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: