ಕರ್ನಾಟಕ

ಹೂಟಗಳ್ಳಿ ಕೆ.ಹೆಚ್.ಬಿ.ಕಾಲೋನಿಗೆ 5 ಕೋಟಿ 50 ಲಕ್ಷ ಬಿಡುಗಡೆ : ಶಾಸಕ ಜಿ.ಟಿ.ದೇವೇಗೌಡ

ರಾಜ್ಯ(ಬೆಂಗಳೂರು)ಜುಲೈ 5:- ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಇದ್ದ ಹೂಟಗಳ್ಳಿ ಗ್ರಾಮದಲ್ಲಿರುವ  ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಮಾಡಿರುವ ಬಡಾವಣೆಯಲ್ಲಿ ರಸ್ತೆ, ಚರಂಡಿ ಮತ್ತು ಒಳಚರಂಡಿ ಪುನರ್ ನಿರ್ಮಾಣ ಕಾಮಗಾರಿಗೆ 5 ಕೋಟಿ 50 ಲಕ್ಷ ಮಂಜೂರಾಗಿರುವುದಾಗಿ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಬುಧವಾರ ಬೆಂಗಳೂರಿನ ಕರ್ನಾಟಕ ಗೃಹ ಮಂಡಳಿಯ ಕೇಂದ್ರ ಕಛೇರಿಯಲ್ಲಿ ಗೃಹ ಮಂಡಳಿಯ ಅಧ್ಯಕ್ಷರಾದ ಮಾಲೀಕಯ್ಯ ಗುತ್ತಿದಾರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೂಟಗಳ್ಳಿ ಗೃಹ ಮಂಡಳಿ ಬಡಾವಣೆಯಲ್ಲಿ 5 ಕೋಟಿ 50 ಲಕ್ಷ ಅನುದಾನದಲ್ಲಿ ರಸ್ತೆ, ಚರಂಡಿ ಮತ್ತು ಒಳಚರಂಡಿ ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಈಗಾಗಲೇ ತೀರ್ಮಾನಿಸಿದ್ದು, ಅಂದಾಜು ಪಟ್ಟಿಯನ್ನು ಸಹ ತಯಾರಿಸಲಾಗಿದೆ. ಈ ಸಂಬಂಧ ಈ ಹಿಂದೆ ಅಧ್ಯಕ್ಷರೊಡನೆ, ಗೃಹ ಆಯುಕ್ತರೊಡನೆ ಹಲವಾರು ಬಾರಿ ಚರ್ಚಿಸಿದ್ದು, ಕಾಮಗಾರಿಯನ್ನು ಗೃಹ ಮಂಡಳಿಯೇ ಕೈಗೊಳ್ಳುವುದು ಕಾಮಗಾರಿ ಟೆಂಡರ್ ಪ್ರಕ್ರೀಯೆ ಪ್ರಾರಂಭವಾದ ತಕ್ಷಣ ಬಡಾವಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಕಾಮಗಾರಿಯನ್ನು ಮುಂದಿನ ಮೂರು ತಿಂಗಳಲ್ಲಿ ಮುಗಿಸುವಂತೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಯು ಸಹ ಈಗಾಗಲೇ  ಗೃಹ ಮಂಡಳಿಯು ಪೂರ್ಣ ಪ್ರಮಾಣದಲ್ಲಿ ಕಾಮಗಾರಿಗಳನ್ನು ಕೈಗೊಂಡ ನಂತರ ಅಂದರೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಬಡಾವಣೆಯನ್ನು ಪಂಚಾಯಿತಿಗೆ ಹಸ್ತಾಂತರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಣಯಿಸಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷರಾದ ರಾಜಮ್ಮ ತಿಳಿಸಿದರು.

ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಗೃಹ ಮಂಡಳಿ ಅಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್, ಗೃಹ ಆಯುಕ್ತ ಇಬ್ರಾಹಿಂ, ಮುಖ್ಯ ಅಭೀಯಂತರರು ಗಣೇಶ್,  ಗ್ರಾ.ಪಂ.ಅಧ್ಯಕ್ಷರಾದ ರಾಜಮ್ಮ, ಸದಸ್ಯರುಗಳಾದ ಸುರೇಶ್, ನಂಜುಂಡೇಗೌಡ,ಲೋಕೇಶ್, ಸಿದ್ದರಾಜು, ಶಿವಮಲ್ಲು, ದೇವರಾಜು, ಕೃಷ್ಣ, ಶಂಕರಲಿಂಗಯ್ಯ, ಪಿ.ಡಿ.ಓ.ಮಹದೇವನಾಯಕ, ಗೃಹ ಮಂಡಳಿ ಇ.ಇ. ಚಂದ್ರಶೇಖರಯ್ಯ, ಎ.ಇ.ಇ. ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: