ಮೈಸೂರು

ಹೋಟೆಲ್ ಮಾಲೀಕರ ಸಂಘದಿಂದ ಪೊಲೀಸ್ ಆಯುಕ್ತ ದಯಾನಂದರಿಗೆ ಸನ್ಮಾನ

ಮೈಸೂರು ದಸರಾವನ್ನು ಯಶಸ್ವಿಯಾಗಿ ನಡೆಸಲು ಕಾರಣಕರ್ತರಾದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರನ್ನು ಮೈಸೂರು ನಗರ ಹೋಟೆಲ್ ಮಾಲೀಕರ ಸಂಘದ ಸದಸ್ಯರು ಆಯುಕ್ತರ ಕಚೇರಿಯಲ್ಲಿ ಸನ್ಮಾನಿಸಿದರು.

ಬಳಿಕ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಿ.ನಾರಾಯಣ ಗೌಡ ಮಾತನಾಡಿ, ಕಾವೇರಿ ವಿವಾದದ ನಡುವೆಯೂ ವಿಶ್ವವಿಖ್ಯಾತ ದಸರಾವು ಆಯುಕ್ತ ಬಿ. ದಯಾನಂದ್ ಅವರ ನೇತೃತ್ವದಲ್ಲಿ ಯಾವುದೇ ತೊಂದರೆಯಿಲ್ಲದೆ ನೆರವೇರಿದೆ. ದಸರಾಗು ಮೊದಲೇ ನಗರದಲ್ಲಿ ಹಲವು ಪ್ರತಿಭಟನೆಗಳು, ಬಂದ್‍ಗಳು ನಡೆದಿದ್ದವು. ಆದರೆ, ಪೊಲೀಸ್ ಆಯುಕ್ತರು ಪರಿಸ್ಥಿತಿಯನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ದಯಾನಂದ್ ಅವರ ವರ್ಗಾವಣೆ ವಿಚಾರ ನಮಗೆಲ್ಲರಿಗೂ ಬೇಸರ ಉಂಟುಮಾಡಿದೆ. ಅವರ ಮುಂದಿನ ಬದುಕಿಗೆ ಶುಭ ಹಾರೈಸುತ್ತೇವೆ ಎಂದರು.

ರವಿ ಶಾಸ್ತ್ರಿ, ಎ.ಆರ್. ರವೀಂದ್ರ ಭಟ್, ಮಹೇಶ್ ಕಾಮತ್, ಎಮ್.ಜಿ. ಗಿರಿಧರ್ ಸುಬ್ರಹ್ಮಣ್ಯ ತಂತ್ರಿ ಆರ್., ಆನಂದ ಶಾಸ್ತ್ರಿ, ಎ.ಎಸ್. ಸತೀಶ್ ಮತ್ತು ಸೀತಾರಾಮ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: