ದೇಶಪ್ರಮುಖ ಸುದ್ದಿ

ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನಾ ಬಲಪ್ರಯೋಗವೇ ಸೂಕ್ತ: ಏರ್‍ಛೀಫ್ ಮಾರ್ಷಲ್‍

ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ವಶಮಾಡಿಕೊಳ್ಳಲು ಬಲಪ್ರಯೋಗವೇ ಸೂಕ್ತ ಮಾರ್ಗ ಎಂದು ವಾಯುಪಡೆ ಮುಖ್ಯಸ್ಥ, ಏರ್‍ಚೀಫ್ ಮಾರ್ಷಲ್ ಅರೂಪ್ ರಾಹ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ವಾಯುಪಡೆ ವಿಚಾರಸಂಕಿರಣದಲ್ಲಿ ಭಾಗವಹಿ ಮಾತನಾಡುತ್ತಿದ್ದ ಅವರು, 1947 ರಲ್ಲಿ ಕಾಶ್ಮೀರದ ನಾಗರಿಕರ ಮೇಲೆ ಪಾಕಿಸ್ಥಾನ ಸೇನೆಯ ದೌರ್ಜನ್ಯ ತಡೆದು ಹಿಮ್ಮೆಟ್ಟಿಸಿದ ಕಾರ್ಯಾಚರಣೆ ಹೊರತು ಪಡಿಸಿದರೆ, ಆಕ್ರಮಿತ ಕಾಶ್ಮೀರವನ್ನು ಮರಳಿ ವಶ ಮಾಡಿಕೊಳ್ಳಲು ಇಂದಿನವರೆಗೆ ಭಾರತ ಶಾಂತಿಯುತ ಮತ್ತು ನೈತಿಕ ಮಾರ್ಗ ಅನುಸರಿಸುತ್ತಿದೆ. ಇದು ಪಾಕಿಸ್ತಾನಕ್ಕೆ ಅರ್ಧವಾಗುವ ಭಾಷೆಯಲ್ಲ ಎಂದು ಅಭಿಪ್ರಾಯಪಟ್ಟರು.

ಸೇನಾ ಬಲಪ್ರಯೋಗ ಮಾಡಿ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ ಪ್ರದೇಶಗಳನ್ನು ವಶ ಮಾಡಿಕೊಳ್ಳಲು ದೊರೆತ ಹಲವು ಅವಕಾಶಗಳನ್ನು ಭಾರತ ಬಳಸಿಕೊಳ್ಳಲಿಲ್ಲ. ಭಾರತದ ವಿದೇಶಾಂಗ ನೀತಿ ವಿಶ್ವಸಂಸ್ಥೆಯ ಶಾಂತಿ ಸೂತ್ರಗಳೊಂದಿಗೆ ಹೆಜ್ಜೆ ಇಡುತ್ತಿದೆ. ಇದರಿಂದ ಹೆಚ್ಚು ಪ್ರಯೋಜನವಿಲ್ಲ. ಇತರ ದೇಶಗಳಿಗೆ ಹೋಲಿಸಿದರೆ ನಾವು ನಮ್ಮ ಸೇನೆಗೆ ಅಗತ್ಯವಿದ್ದಷ್ಟು ಮಹತ್ವ ನೀಡಲಿಲ್ಲ. ಗಡಿ ಭದ್ರತಾ ವಿಚಾರದಲ್ಲಿ ಸೇನೆಯ ಪಾತ್ರವೇ ನಿರ್ಣಾಯಕ ಎಂಬುದನ್ನು ನಾವು ಮರೆಯಬಾರದು’ ಎಂದು ರಾಹಾ ವಿಶ್ಲೇಷಿಸಿದರು.

ವಾಯುಪಡೆ ಪಾತ್ರ ಮಹತ್ವದ್ದು: ‘1947ರಲ್ಲಿ ಸೈನಿಕರ ಪ್ರಯಾಣಕ್ಕೆ ಮತ್ತು ಶಸ್ತ್ರಾಸ್ತ್ರ ಪೂರೈಕೆಗೆ ಸಾಗಣೆ ವಿಮಾನಗಳನ್ನಷ್ಟೇ ಉಪಯೋಗಿಸಲಾಗಿತ್ತು. ನಂತರ ದಶಕಗಳಲ್ಲಿ ರಾಜಕೀಯ ಮತ್ತು ತಾಂತ್ರಿಕ ಕಾರಣಗಳಿಂದಾಗಿ ವಾಯುಪಡೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ವಾಯುಪಡೆ ತನ್ನ ಬಲ ಪ್ರಯೋಗಿಸಿತು. ಹೀಗಾಗಿಯೇ ಆ ಯುದ್ಧವನ್ನು ದಾಖಲೆ ವೇಗದಲ್ಲಿ ಗೆಲ್ಲಲು ಸಹಾಯವಾಯಿತು ಎಂದರು. ಆರಂಭಿಕ ಹಂತದಲ್ಲಿ ಕಾಶ್ಮೀರ ವಿವಾದವನ್ನು ಯುದ್ಧದ ಮೂಲಕವೇ ಬಗೆಹರಿಸಬಹುದಿತ್ತು. ನಮ್ಮ ಮುಂದೆ ಯುದ್ಧದ ಆಯ್ಕೆ ಕಾಣುತ್ತಿದ್ದರೂ, ನಾವು ವಿಶ್ವಸಂಸ್ಥೆಯ ಮೊರೆ ಹೋದೆವು. ಹೀಗಾಗಿ ಪಾಕ್‌ ಆಕ್ರಮಿತ ಕಾಶ್ಮೀರ ವಿವಾದ ಇನ್ನೂ ಬಗೆಹರಿದಿಲ್ಲ ಎಂದು ಬೇಸರದಿಂದ ನುಡಿದರು.

Leave a Reply

comments

Related Articles

error: