ಮೈಸೂರು

ಹಣ ಪಾವತಿಸಿ ವಾಹನ ನಿಲ್ಲಿಸಿ

ಮೈಸೂರಿನ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ ಮತ್ತು ಅಶೋಕ ರಸ್ತೆಗಳ ಪ್ರಮುಖ ಕಮರ್ಶಿಯಲ್ ಜಂಕ್ಷನ್ ಗಳಲ್ಲಿ ಇನ್ನು ಮುಂದೆ ವಾಹನ ಸವಾರರು ತಮ್ಮ ವಾಹನ ನಿಲ್ಲಿಸಲು ಹಣ ಪಾವತಿಸಿ ವಾಹನ ನಿಲ್ಲಿಸಬೇಕಾಗುತ್ತದೆ.

ಇದೇ ಮೊದಲ ಬಾರಿಗೆ ಮೈಸೂರು ನಗರಪಾಲಿಕೆಯು ಈ ಯೋಜನೆಯನ್ನು ಜಾರಿಗೆ ತರಲಿದ್ದು, ಅವುಗಳನ್ನು ನೋಡಿಕೊಳ್ಳಲು ಆನ್ ಲೈನ್ ಮೂಲಕ ಟೆಂಡರ್ ಕರೆಯಲಾಗಿದೆ. ಯೋಜನೆಯು ನವೆಂಬರ್ 11ರಿಂದ ಜಾರಿಗೆ ಬರಲಿದೆ.

ಈ ಕುರಿತು ಮನಪಾ ಮೇಯರ್ ಬಿ.ಎಲ್.ಭೈರಪ್ಪ ವರದಿಗಾರರೊಂದಿಗೆ ಮಾತನಾಡಿ ಅಂಗಡಿ ಮಾಲಿಕರು ಬಹುತೇಕ ಜಾಗಗಳನ್ನು ಆಕ್ರಮಿಸಿ ಬಿಡುತ್ತಾರೆ ಎಂದು ಸಾಕಷ್ಟು ದೂರುಗಳು ಬಂದಿವೆ. ಅದರಲ್ಲೂ ವಾಣಿಜ್ಯ ರಸ್ತೆಗಳಲ್ಲಿ ಪಾರ್ಕಿಂಗ್ ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಈ ಹೊಸಯೋಜನೆಗೆ ರೂಪಿಸಿದ್ದು ಇದರಿಂದ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇದೆ ಎಂದರು.

Leave a Reply

comments

Related Articles

error: