ಸುದ್ದಿ ಸಂಕ್ಷಿಪ್ತ

ಆಧಾರ್ ತಿದ್ದುಪಡಿಗೆ ಅವಕಾಶ

ಮಡಿಕೇರಿ, ಜು.5:-ಆಧಾರ್ ಅಪ್ಡೇಟ್ ಕೇಂದ್ರವನ್ನು ಜುಲೈ, 05 ರಿಂದ ಪ್ರಧಾನ ಅಂಚೆ ಕಚೇರಿ, ಮಡಿಕೇರಿಯಲ್ಲಿ ತೆರೆಯಲಾಗುವುದು. ಹೆಸರು, ವಿಳಾಸ, ಹುಟ್ಟಿದ ದಿನಾಂಕ/ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಈ-ಮೇಲ್ ವಿಳಾಸ ಮಾಹಿತಿಗಳನ್ನು ಸೂಕ್ತ ದಾಖಲಾತಿ ಸಲ್ಲಿಸುವುದರೊಂದಿಗೆ ಸಾರ್ವಜನಿಕರು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಡಿಕೇರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: