ಕರ್ನಾಟಕ

ಬಾರ್ ಮುಂದೆ ನಿಂತಿದ್ದ ನೂರಾರು ವಾಹನಗಳ ವಶ

ಚಾಮರಾಜನಗರ, ಜು.6 : ಬಾರ್ ಮುಂದೆ ನಿಂತಿದ್ದ ನೂರಾರು ವಾಹನಗಳನ್ನು ಎಎಸ್ಪಿ ಗೀತಾ  ಪ್ರಸನ್ನ ಅವರ ನೇತೃತ್ವ ಠಾಣೆಗೆ ಸಾಗಿಸಲಾಗಿದೆ‌ .

ಸುಪ್ರೀಂ ಕೋರ್ಟ್ ಆದೇಶದಂತೆ ಹೆದ್ದಾರಿಯಿಂದ 5೦೦ ಮೀ ದೂರದಲ್ಲಿ ‌ಬಾರ್ ನ್ನು ನಿಷೇಧಿಸಿದ್ದರ ಪರಿಣಾಮ  ಉಳಿದ ಬಾರ್ ಗಳ ಮುಂದೆ ಮದ್ಯಪ್ರಿಯರು ಮುಗಿ ಬಿದ್ದಿದ್ದರು.  ಮದ್ಯಸೇವನೆ ಪ್ರಿಯರು ತಮ್ಮ ವಾಹನಗಳನ್ನ ಅಡ್ಡಾದಿಡ್ಡಿ ನಿಲ್ಲಿಸಿದ್ದರಿಂದ ಸಂಚಾರ ಅಸ್ತವ್ಯಸ್ಥವಾಗಿತ್ತು.‌ ಇದನ್ನ ಮನಗಂಡ ಪೊಲೀಸರು ಕಾರ್ಯಾಚರಣೆ ನಡೆಸಿ ನೂರಾರು ವಾಹನಗಳನ್ನ ಜಪ್ತಿ ಮಾಡಿದ್ದಾರೆ. ವಿಶೇಷ ಎಂದರೆ ಬಹುತೇಕ ಅಧಿಕಾರಿಗಳ ವಾಹನದ ಜೊತೆಗೆ‌ ಮದ್ಯಸೇವನೆ ಪ್ರಿಯ ಅಬಕಾರಿ ಅಧಿಕಾರಿಯೋರ್ವರ ವಾಹನವನ್ನೂ ಇಲ್ಲಿ ತುಂಬಿದ್ದಾರೆ ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ಪಟ್ಟಣದ ಇನ್ಸ್ ಪೆಕ್ಟರ್, ಗ್ರಾಮಾಂತರ ಠಾಣೆ‌, ಸಂಚಾರ ಠಾಣಾ‌ ಇನ್ಸ್ ಪೆಕ್ಟರ್ ಭಾಗಿಯಾಗಿದ್ದು ಖುದ್ದು ಎಎಸ್ಪಿ ಅವರೇ ಸ್ವತಃ  ನಿಂತು ಸಂಚಾರ ವ್ಯವಸ್ಥೆಯನ್ನು ರಾತ್ರಿ ಸುಗಮಗೊಳಿಸಿದ್ದಾರೆ. (ವರದಿ: ಆರ್.ವಿ.ಎಸ್, ಎಲ್.ಜಿ)

Leave a Reply

comments

Related Articles

error: