ಮೈಸೂರು

ನಗರ ಕಾರ್ಮಿಕರ ಜೀವನದ ಬಗ್ಗೆ ವಿಚಾರಗೋಷ್ಠಿ ಅ.16ರಂದು

ಮಾಜಿ ಮೇಯರ್ ಮತ್ತು ಸಫಾಯಿ ಕರ್ಮಚಾರಿಗಳ ರಾಜ್ಯ ಆಯೋಗದ ಅಧ್ಯಕ್ಷ ನಾರಾಯಣ ಅವರ ಜನ್ಮದಿನದ ಅಂಗವಾಗಿ ಪ್ರಗತಿ ಸೇವಾ ಟ್ರಸ್ಟ್ ಮತ್ತು ನಾರಾಯಣ ಅಭಿಮಾನಿ ಬಳಗದಿಂದ ಧನ್ಯವಾದ ಸಮರ್ಪಣೆ ಮತ್ತು ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಗತಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಎನ್.ಲೋಕೇಶ್, ಅ.16ರಂದು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‍ನಲ್ಲಿ ‘ನಗರ ಕಾರ್ಮಿಕರ ಜೀವನ ಮತ್ತು ಪರಿವರ್ತನೆ’ ಎಂಬ ವಿಷಯದ ಮೇಲೆ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ. ಖ್ಯಾತ ಬರಹಗಾರ ಪ್ರೊ. ಕಾಳೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರೊ.ಎಚ್. ಗೊಂವಿಂದಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಮ್.ಕೆ. ಸೋಮಶೇಖರ್, ಕಾರ್ಪೋರೇಟರ್ ಪುರುಷೋತ್ತಮ್, ಮೈಸೂರು ಜಿಲ್ಲಾ ಪ್ರೆಸ್‍ಕ್ಲಬ್ ಅಧ್ಯಕ್ಷ ಕೆ. ದೀಪಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭಾವನಾ ಸಾಂಸ್ಕೃತಿಕ ವೇದಿಕೆಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಪ್ರಗತಿ ಸೇವಾ ಟ್ರಸ್ಟ್ ಸದಸ್ಯ ಆರ್. ಲಕ್ಷ್ಮಣ್ ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: