ಮೈಸೂರು

ಹಾಲ್ಬಿಳುಪಿನ ಅಮೃತಶಿಲೆಯಲ್ಲಿ ಸಿದ್ಧಗೊಳ್ಳುತ್ತಿದೆ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ

ಮೈಸೂರು,ಜು.6:- ಹಾಲ್ಬಿಳುಪಿನ ಅಮೃತಶಿಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರೂಪುಗೊಳ್ಳುತ್ತಿದ್ದಾರೆ.

ಮೈಸೂರು ಪುರಭವನದ ಎದುರು ಡಾ.ಅಂಬೇಡ್ಕರ್ ಪುತ್ಥಳಿಯನ್ನು ನಿಲ್ಲಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಅದಕ್ಕನುಗುಣವಾಗಿ ರಾಜಸ್ಥಾನದಿಂದ ತಂದ ಅಮೃತಶಿಲೆಯಿಂದ ಡಾ.ಅಂಬೇಡ್ಕರ್ ಪುತ್ಥಳಿ ಸರಸ್ವತಿಪುರಂನಲ್ಲಿ ಶಿಲ್ಪಿ ಅರುಣ್ ಎಂಬವರಿಂದ ಸಿದ್ಧಗೊಳ್ಳುತ್ತಿದ್ದು, ಪುತ್ಥಳಿಗೆ ಅಂತಿಮ ರೂಪು ನೀಡುತ್ತಿದ್ದಾರೆ. ಪುರಭವನದ ಎದುರು ನಿರ್ಮಿಸಲಾದ ಐದು ಅಡಿ ಎತ್ತರದ ಪೀಠದ ಮೇಲೆ ಹತ್ತು ಅಡಿ ಎತ್ತರದ ಅಂಬೇಡ್ಕರ್ ಪುತ್ಥಳಿ ರಾರಾಜಿಸಲಿದೆ. ಶಿಲ್ಪಿ ಅರುಣ್ ಮೂಲತಃ ಮೈಸೂರಿನವರೇ ಆಗಿದ್ದು, ಅವರ ತಾತನ ಕಾಲದಿಂದಲೂ ಪರಂಪರಾನುಗತವಾಗಿ ಶಿಲ್ಪರಚನೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. 35 ಟನ್ ತೂಕದ ಈ ಪುತ್ಥಳಿ ನಿರ್ಮಾಣಕ್ಕೆ ಬರೋಬ್ಬರಿ ನಾಲ್ಕು ತಿಂಗಳು ತಗುಲಿದೆಯಂತೆ. ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿರುವ ಈ ಪುತ್ಥಳಿಯನ್ನು ಬಳಿಕ ಸಾರ್ವಜನಿಕರೆಲ್ಲರೂ ವೀಕ್ಷಿಸಬಹುದಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: