ಮೈಸೂರು

50 ಕೋಟಿ ರು. ವೆಚ್ಚದಲ್ಲಿ ನಗರದ ರಸ್ತೆಗಳ ದುರಸ್ತಿ

ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ಸೇರಿ ಇತರ ರಸ್ತೆಗಳ ದುರಸ್ತಿ ಕಾರ್ಯವನ್ನು ಮಹಾನಗರ ಪಾಲಿಕೆಯು ಕೈಗೆತ್ತಿಕೊಂಡಿದೆ. ಸುಮಾರು 50 ಕೋಟಿ ರು. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ ಎಂದು ಮೇಯರ್ ಬಿ.ಎಲ್. ಬೈರಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಲಿಕೆಯು ರಿಂಗ್‍ ರೋಡ್‍ಗೆ ಸಂಪರ್ಕ ಕಲ್ಪಿಸುವ ಒಂದಷ್ಟು ರಸ್ತೆಗಳನ್ನು ಈಗಾಗಲೇ ಗುರುತಿಸಿದೆ. ಈ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ, ರಸ್ತೆಗಳ ವಿಸ್ತರಣೆ, ಒಳಚರಂಡಿ ನಿರ್ಮಾಣ, ಇಂಟರ್‍ಲಾಕ್ ಟೈಲ್ಸ್‍ಗಳನ್ನು ಅಳವಡಿಸಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ 16 ಕೋಟಿ ರು. ಅನ್ನು ಮೈಸೂರು ನಗರದ ರಸ್ತೆಗಳ ದುರಸ್ತಿಗಾಗಿ ಮಂಜೂರು ಮಾಡಿದ್ದಾರೆ. ದುರಸ್ತಿ ಕಾರ್ಯದ ಬಗ್ಗೆ ಮಾಹಿತಿ ನೀಡುವಂತೆ ಸಿಎಂ ಸೂಚಿಸಿದ್ದಾರೆ. ಹಾಗಾಗಿ, ಅಲ್ಪಾವಧಿ ಟೆಂಡರ್‍ಗಳನ್ನು ಕರೆದಿದ್ದು, ಕೆಲಸವನ್ನು ಆದಷ್ಟು ಬೇಗ ಮುಗಿಸಲಿದ್ದೇವೆ ಎಂದು ಮೇಯರ್ ಬೈರಪ್ಪ ಹೇಳಿದರು.

Leave a Reply

comments

Related Articles

error: