ಕ್ರೀಡೆ

ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಯಭೇರಿ ಬಾರಿಸಿದ ಭಾರತ

ಡರ್ಬಿ (ಇಂಗ್ಲೆಂಡ್), ಜು.06 : ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ವನಿತೆಯರು ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೇ ಜಯದೊಂದಿಗೆ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿದರು.

ಇಲ್ಲಿನ ಕೌಂಟಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡ ಶ್ರೀಲಂಕಾವನ್ನು 16 ರನ್ ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿ ಭಾರತದ ದೀಪ್ತಿ ಶರ್ಮ ಮತ್ತು ಮಿಥಾಲಿ ರಾಜ್ ಅವರ ಅರ್ಧಶತಕದ ನೆರವಿನಿಂದ 8 ವಿಕೆಟಿಗೆ 232 ರನ್ ಗಳ ಉತ್ತಮ ಮೊತ್ತ ಪೇರಿಸಿತು. ಗೆಲುವಿನ ಗುರಿ ಬೆನ್ನಟ್ಟಿದ ಶ್ರೀಲಂಕಾ 7 ವಿಕೆಟಿಗೆ 217 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲವು ಸಾಧಿಸಿತು. ಈ ಮೊದಲು ನಡೆದ ಪಂದ್ಯಗಳಲ್ಲಿ ಭಾರತವು ಆತಿಥೇಯ ಇಂಗ್ಲೆಂಡ್, ವೆಸ್ಟ್‌ಇಂಡೀಸ್ ಮತ್ತು ಪಾಕಿಸ್ಥಾನವನ್ನು ಸೋಲಿಸಿತ್ತು.

ಸ್ಕೋರುಗಳ ವಿವರ:

ಭಾರತ ವನಿತೆಯರು: 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 232 (ದೀಪ್ತಿ ಶರ್ಮಾ 78, ಮಿಥಾಲಿ ರಾಜ್ 53, ಹರ್ಮನ್ ಪ್ರೀತ್ ಕೌರ್ 20, ವೇದಾ ಕೃಷ್ಣಮೂರ್ತಿ 29; ಶ್ರೀಪಾಲಿ ವೀರಕ್ಕೊಡಿ 28ಕ್ಕೆ3, ಇನೋಕ ರಣವೀರ 55ಕ್ಕೆ2).

ಶ್ರೀಲಂಕಾ ವನಿತೆಯರು: 50 ಓವರ್ಗಳಲ್ಲಿ 7 ವಿಕೆಟ್ಗಳಿಗೆ 216 (ನಿಪುಣಿ ಹಂಸಿಕಾ 29, ಶಶಿಕಲಾ ಸಿರಿವರ್ಧನೆ 37, ದಿಲಾನಿ ಮನೋದರ 61, ಪ್ರಸಾದನಿ ವೀರಕ್ಕೋಡಿ 21; ಜೂಲನ್ ಗೋಸ್ವಾಮಿ 26ಕ್ಕೆ2, ಪೂನಮ್ ಯಾದವ್ 23ಕ್ಕೆ2). ಫಲಿತಾಂಶ-ಭಾರತ ವನಿತೆಯರಿಗೆ 16 ರನ್ ಗಳ ಜಯ. ಪಂದ್ಯಶ್ರೇಷ್ಠ-ದೀಪ್ತಿ ಶರ್ಮಾ (ಭಾರತ). (ವರದಿ: ಎಲ್.ಜಿ)

Leave a Reply

comments

Related Articles

error: