ಕರ್ನಾಟಕಪ್ರಮುಖ ಸುದ್ದಿ

ಆಗಷ್ಟ ವೇಳೆಗೆ ಮೋಡ ಬಿತ್ತನೆ ಕಾರ್ಯಕ್ರಮ : ಕೃಷಿ ಸಚಿವ ಕೃಷ್ಣ ಭೈರೇಗೌಡ

ರಾಜ್ಯ(ಬಾಗಲಕೋಟ)ಜು.6:-. ಆಗಷ್ಟ ವೇಳೆಗೆ ಮೋಡ ಬಿತ್ತನೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಇತ್ತೀಚೆಗಷ್ಟೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಮೋಡ ಬಿತ್ತನೆಗೆ ವಿರೋಧ ವ್ಯಕ್ತವಾದರೂ, ಮೋಡ ಬಿತ್ತನೆ ಕಾರ್ಯ ಕೈಬಿಡುವದಿಲ್ಲ.ಮೋಡ ಬಿತ್ತನೆ ಒಂದು ವೈಜ್ಞಾನಿಕ ಕಾರ್ಯಕ್ರಮ. ನುರಿತ ತಜ್ಞರನ್ನ ಸಂಪರ್ಕಿಸಿಯೇ ಈ ಕಾರ್ಯ ಆರಂಭಿಸಲಾಗುತ್ತಿದೆ.ವಿದೇಶ ವಿಮಾನ ಬಳಸಿಕೊಂಡು ಮೋಡ ಬಿತ್ತನೆ ಮಾಡಲಾಗುವುದು.ರಾಜ್ಯದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿ ಎರಡು ಕೇಂದ್ರಗಳ ಮೂಲಕ ಮೋಡ ಬಿತ್ತನೆ ಕಾರ್ಯಾರಂಭವಾಗಲಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: