ಮೈಸೂರು

ಶೌಚಾಲಯ ಬ್ಲಾಕ್‍ಗಳ ಯೋಜನೆಗೆ ಮೈಸೂರು ಅಮಿಟಿ ರೌಂಡ್ ಟೇಬಲ್‍ನಿಂದ ಚಾಲನೆ

ಮೈಸೂರು, ಜುಲೈ 6:- ಮೈಸೂರು ಅಮಿಟಿ ರೌಂಡ್ ಟೇಬಲ್ 156 ವತಿಯಿಂದ ಮೈಸೂರಿನ ಎಚ್‍ಡಿ ಕೋಟೆ ತಾಲೂಕಿನ ಹಳ್ಳದಮನುಗನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಬ್ಲಾಕ್‍ಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಯಿತು.

ಆರ್ ಟಿಐ ಏರಿಯಾ 13ರ ಎಎಸ್‍ಟಿ ಮಯೂರ್ ಶಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಮಾರ್ಟ್  156 ಅಧ್ಯಕ್ಷ ಕಿರಣ್ ವಿ. ರಂಗಾ ಮಾತನಾಡಿ ಮೂಲಭೂತ ನೈರ್ಮಲ್ಯದ ಕೊರತೆಯು ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಅಂಶವಾಗಿದೆ. ಸಾಮಾನ್ಯ ನೈರ್ಮಲ್ಯದ ವಿಷಯದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಇದು ಮಕ್ಕಳ ಆರೋಗ್ಯದ ಮೇಲೆ ಮಾತ್ರವಲ್ಲ, ಅಧ್ಯಯನದ ಮೇಲೂ ಪ್ರಭಾವ ಬೀರುತ್ತದೆ. ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಕೆಲಸ ಮಾಡುವ ಜೊತೆಗೆ ಇಂತಹ ಸಮಾಜಮುಖಿ ಅಭಿಯಾನದ ಭಾಗವಾಗಲು ಸಂತೋಷ ಪಡುತ್ತೇವೆ ಎಂದರು. ಎಚ್‍ಡಿ ಕೋಟೆ ತಾಲೂಕಿನ ಹಳ್ಳದಮನುಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 1950ರಲ್ಲಿ ಆರಂಭವಾಯಿತು. ಆರಂಭದಲ್ಲಿ ಕೇವಲ 85 ಜನ ಬಡ ಮಕ್ಕಳು ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದರು. ಶಾಲೆಯಲ್ಲಿ ಕೇವಲ ಒಂದೇ ಒಂದು ಶೌಚಾಲಯವಿದ್ದು, ಇದರಿಂದ ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ಪರಿಣಾಮ ಉಂಟಾಗುತ್ತಿತ್ತು. ಮೈಸೂರು ಅಮಿಟಿ ರೌಂಡ್ ಟೇಬಲ್ 156 ವತಿಯಿಂದ ರೂ 3.5 ಲಕ್ಷ ವೆಚ್ಚದಲ್ಲಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐದು ಶೌಚಾಲಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಹಳ್ಳದಮನುಗನಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸರಸ್ವತಿ ಬಾಯಿ ಉಪಸ್ಥಿತರಿದ್ದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: