ದೇಶಪ್ರಮುಖ ಸುದ್ದಿ

ಮಾತುಕತೆಗೆ ಮುನ್ನ ಸೇನೆ ವಾಪಸ್ ಪಡೆಯಿರಿ : ಚೀನಾ ಸಲಹೆಗಾರನಿಂದ ಭಾರತಕ್ಕೆ ಎಚ್ಚರಿಕೆ!

ಹೊಸದಿಲ್ಲಿ, ಜುಲೈ 6 : ಪ್ರಸ್ತುತ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಭಾರತದೊಂದಿಗೆ ಮಾತುಕತೆ ನಡೆಸಬೇಕಾದರೆ ಭಾರತ ಮೊದಲು ಸಿಕ್ಕಿ ವಲಯದ ಧೋಕ್ಲಾದಲ್ಲಿ ನಿಯೋಜಿಸಿರುವ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಚೀನಾ ಹೇಳಿದೆ.

ಭೂತಾನ್ ಗಡಿಗೆ ಹೊಂದಿಕೊಂಡಿರುವ ಧೋಕ್ಲಾದಲ್ಲಿ ಭಾರತ-ಚೀನಾ ಸೇನೆಗಳು ಮುಖಾಮುಖಿಯಾಗಿವೆ. ಈ ಬಿಕ್ಕಟ್ಟು ಬಗೆಹರಿಯಬೇಕಾದರೆ ಭಾರತವು ಮೊದಲು ತನ್ನ ಸೇನೆಯನ್ನು ತಕ್ಷಣ ಮತ್ತು ಬೇಷರತ್‍ ಆಗಿ ಹಿಂಪಡೆಯಬೇಕು ಎಂದು ಭಾರತದಲ್ಲಿನ ಚೀನಾ ದೂತಾವಾಸದಲ್ಲಿರುವ ರಾಜಕೀಯ ಸಲಹೆಗಾರ ಲಿ ಯಾ ಅವರು ಭಾರತ ಸರ್ಕಾರಕ್ಕೆ ಎಚ್ಚರಿಕೆ ರೂಪದ ಸಲಹೆ ನೀಡಿದ್ದಾರೆ.

ಸಿಕ್ಕಿಂ ಮತ್ತು ಟಿಬೆಟ್‍ ಪ್ರಾಂತ್ಯಗಳಿಗೆ ಸಂಬಂಧಪಟ್ಟಂತೆ 1890 ರಲ್ಲಿ ಆಗಿದ್ದ ಚೀನಾ-ಬ್ರಿಟನ್ ಒಪ್ಪಂದದಲ್ಲಿ ಸಿಕ್ಕಿಂ ಗಡಿಯಲ್ಲಿನ ಡೋಕ್ಲಾಮ್ ಪ್ರದೇಶವನ್ನು ಚೀನಾಗೆ ಸೇರಿಸಲಾಗಿದೆ. ಇದನ್ನು ಸಾಬೀತುಪಡಿಸುವ ದಾಖಲೆ ಪತ್ರಗಳು ನಮ್ಮಲ್ಲಿವೆ. ಡೋಕ್ಲಾಮ್‍ನಲ್ಲಿ ರಸ್ತೆ ನಿರ್ಮಿಸುತ್ತಿರುವುದು ತಮ್ಮ ನಿಯಂತ್ರಣದಲ್ಲಿರುವ ಭೂಪ್ರದೇಶದ ಒಳಗಿನ ಕಾನೂನುಬದ್ಧ ಚಟುವಟಿಕೆ ಆಗಿದೆ. ಭಾರತ ಅಥವಾ ಭೂತಾನ ಇದನ್ನು ಪ್ರಶ್ನಿಸಲು ಯಾವುದೇ ಹಕ್ಕು ಹೊಂದಿದ್ದ ಎಂದು ಚೀನಾ ವಾದಿಸಿದೆ.

-ಎನ್.ಬಿ.

Leave a Reply

comments

Related Articles

error: