ಮನರಂಜನೆ

ಜನ್ಮದಿನವನ್ನು ದೀಪಿಕಾ ಪಡುಕೋಣೆ ಜೊತೆ ಆಚರಿಸಿದ ನಟ ರಣವೀರ್ ಸಿಂಗ್

ದೇಶ(ಮುಂಬೈ)ಜು.6:- ಬಾಲಿವುಡ್ ನಟ ರಣವೀರ್ ಸಿಂಗ್ 32ನೇ ಜನ್ಮದಿನವನ್ನಾಚರಿಸಿದ್ದು, ನಟಿ, ಗರ್ಲ್ ಫ್ರೆಂಡ್ ದೀಪಿಕಾ ಪಡುಕೋಣೆ ಜೊತೆ ಸಮಯ ಕಳೆದಿದ್ದಾರಂತೆ.

ಜನ್ಮ ದಿನಕ್ಕಾಗಿ ಏಸ್ಟನ್ ಮಾರ್ಟಿನ್ ಎಂಬ ಹೊಸ ಕಾರೊಂದನ್ನು ಖರೀದಿಸಿದ್ದು, ಬಿಳಿಯ ಬಣ್ಣದ ಈ ಕಾರಿನ ಮೌಲ್ಯ 3.8ಕೋಟಿ ಎಂದು ಹೇಳಲಾಗುತ್ತಿದೆ.  ಸೀದಾ ದೀಪಿಕಾ ಪಡುಕೋಣೆ ಮನೆಗೆ ತೆರಳಿದ ರಣವೀರ್ ದೀಪಿಕಾಳನ್ನು ಕಾರಿನ ಮುಂದಿನ ಸೀಟಿನಲ್ಲಿಯೇ ಕುಳ್ಳಿರಿಸಿಕೊಂಡು ಸೀದಾ ತಾಜ್ ಹೋಟೆಲ್ ಗೆ ಕರೆದೊಯ್ದಿದ್ದಾರಂತೆ. ಬಳಿಕ ತಾಜ್ ಹೋಟೆಲ್ ನಲ್ಲಿ ಊಟ ಮಾಡಿ ಎಂಜಾಯ್ ಮಾಡಿದ್ದಾರಂತೆ. ಯಶರಾಜ್ ಫಿಲ್ಮ್ ‘ಬೆಫಿಕ್ರೆ’ದಲ್ಲಿ  ವಾಣಿ ಕಪೂರ್ ಜೊತೆ ಕಾಣಿಸಿಕೊಂಡ ರಣವೀರ್ ಇದೀಗ ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತಿ’ ಚಿತ್ರದಲ್ಲಿ ಬ್ಯುಸಿ ಇದ್ದಾರಂತೆ. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಂತರ ಜಾಯ್ ಅಖ್ತರ್ ‘ಗಲಿ ಬಾಯ್’ ಚಿತ್ರದಲ್ಲಿ ಅಲಿಯಾ ಭಟ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. (ಎಸ್.ಎಚ್)

Leave a Reply

comments

Related Articles

error: