ಕರ್ನಾಟಕ

ಕೌಶಲ್ಯಾಧಾರಿತ ತರಬೇತಿಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಬಸವರಾಜು

ರಾಜ್ಯ(ಚಾಮರಾಜನಗರ)ಜು.6:- ಯುವಕ ಸಂಘಗಳ ಸದಸ್ಯರಿಗೆ ಲಭ್ಯವಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಕೌಶಲ್ಯಾಧಾರಿತ ತರಬೇತಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಚಾಮರಾಜನಗರ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಬಸವರಾಜು ತಿಳಿಸಿದರು.
ಕೊಳ್ಳೇಗಾಲ ನಗರದ ರೋಟರಿ ಭವನದಲ್ಲಿ ನೆಹರು ಯುವ ಕೇಂದ್ರ, ನಂದನ ಮಹಿಳಾ ಅಭಿವೃದ್ಧಿ ಸಂಘ, ರೋಟರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ  ಆಯೋಜಿಸಿದ್ದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಸಂಘ ಪ್ರಶಸ್ತಿ, ರಾಷ್ಟ್ರೀಯ ಸೇವಾ ಕರ್ತರ ಆಯ್ಕೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಯುವಕ ಸಂಘಗಳಿಗೆ ಇವೆ. ವ್ಯಕ್ತಿತ್ವ ವಿಕಸನ ಶಿಬಿರ ಸಹ ನಡೆಯಲಿದೆ. ಅಲ್ಲದೆ ನೋಂದಾಯಿತ ಚಾಲ್ತಿಯಲ್ಲಿರುವ ಸಂಘಗಳಿಗೆ ಕ್ರೀಡಾ ಸಾಮಗ್ರಿಗಳ ವಿತರಣೆ ಸೇರಿದಂತೆ ಇತರೆ ಸೌಲಭ್ಯಗಳು ಇವೆ. ಯುವಕ ಸಂಘಗಳ ಪದಾಧಿಕಾರಿಗಳು ಅವುಗಳ ಅರಿವು ಪಡೆದುಕೊಂಡು ಸದ್ಬಳಕೆಗೆ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವಕೀಲ ಡಿ. ವೆಂಕಟಾಚಲ ಮಾತನಾಡಿ ಯುವ ಸಂಪತ್ತು ದೇಶದ ಅಭಿವೃದ್ಧಿಗೆ ಪೂರಕ. ಯುವ ಜನತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ದೊರೆಯುವ ವಿವಿಧ ಸೌಲಭ್ಯಗಳನ್ನು ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು.
ನೆರೆಹೊರೆಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಯುವಜನತೆ ಮುಂದಾಗಬೇಕು. ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನಕ್ಕೆ ಯುವಕ ಸಂಘಗಳು ಸಂಘಟಿತರಾಗಿ ಮುಂದಾಗಬೇಕು ಎಂದು ಹೇಳಿದರು. ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಕೆ. ಪುಟ್ಟರಸಶೆಟ್ಟಿ, ಕಾರ್ಯದರ್ಶಿ ಜೋಸೆಫ್ ಅಲೆಗ್ಸಾಂಡರ್, ನಂದನ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಮಂಜುಳ, ಸೇವಾ ಪ್ರತಿನಿಧಿ ಉಮಾ, ನಾಗಮ್ಮ, ಮಾರ್ಗದರ್ಶಿ ಸಂಸ್ಥೆಯ ನಂಜುಂಡಸ್ವಾಮಿ, ನಾಗರಾಜು, ಸ್ಪಂದನ ಸಂಘದ ಶಿವಕುಮಾರ್, ನೆಹರು ಯುವ ಕೇಂದ್ರದ ಶಂಕರ್, ರಾಷ್ಟ್ರೀಯ ಸ್ವಯಂ ಸೇವಕರಾದ ಗೋವಿಂದರಾಜು, ಉಮಾಮಹೇಶ್ವರ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: