ಮೈಸೂರು

ಅ.17ರಂದು ರಾಜೀನಾಮೆ ನೀಡುವುದು ಖಚಿತ: ಮಾಜಿ ಸಚಿವ ಶ್ರೀನಿವಾಸ ಪ್ರಸಾದ್

ನಾನು ನನ್ನ ರಾಜೀನಾಮೆ ನಿರ್ಧಾರಕ್ಕೆ ಬದ್ಧನಾಗಿದ್ದು ಅ.17ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇದರಿಂದ ವಿಮುಖನಾಗುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ನುಡಿದವರು ಮಾಜಿ ಸಚಿವ ಹಾಗೂ ಶಾಸಕ ಶ್ರೀನಿವಾಸ ಪ್ರಸಾದ್.

ಅವರು ನಗರದ ಮೈಸೂರು ವಿವಿಯ ಮಾನಸಗಂಗೋತ್ರಿ ಆವರಣದಲ್ಲಿಂದು (ಅ.14) ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪರಿಣಾಮಕಾರಿ ಮಂತ್ರಿಮಂಡಲ ರಚನೆ ಹಿನ್ನೆಲೆಯಲ್ಲಿ ನನ್ನನ್ನು ಕೈ ಬಿಟ್ಟಿದ್ದು ಪುನಾರಚನೆಯಾದ ಮಂತ್ರಿಮಂಡಲವೂ ಮತ್ತಷ್ಟು ದುರ್ಬಲವಾಗಿದ್ದು ಸಿದ್ದರಾಮಯ್ಯನವರ ಉದ್ದೇಶವೇ ಬೇರೆಯಾಗಿದೆ. ಇನ್ನೆರಡು ವರ್ಷಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದ್ದು ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೇರುವುದು ಅಸಾಧ್ಯ. ರಾಜೀನಾಮೆ ನಂತರ ಪ್ರತಿಯೊಂದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವೆ ಎಂದು ಹೇಳಿದರು.

ರಾಜೀನಾಮೆ ಪ್ರಸ್ತಾಪದ ನಂತರ ಕಾಂಗ್ರೆಸ್ ಪಕ್ಷದ ಯಾವುದೇ ಮುಖಂಡರು ನನ್ನ ಸಂಪರ್ಕಿಸಿಲ್ಲ. ನಲ್ವತ್ತ್ಮೂರು ವರ್ಷದ ನನ್ನ ರಾಜಕೀಯ ಜೀವನದಲ್ಲಿ ಈ ರೀತಿಯ ನಿರ್ಲಕ್ಷ್ಯ, ತಾತ್ಸಾರ ಎಂದಿಗೂ ಕಂಡವನಲ್ಲ. ಪಕ್ಷದಲ್ಲಿ ಶುದ್ಧ ಹಸ್ತನಾಗಿ ಸೇವೆ ಸಲ್ಲಿಸಿರುವೆ. ನನ್ನ ಸ್ವಾಭಿಮಾನಕ್ಕೆ ಹಾಗೂ ಆತ್ಮಾಭಿಮಾನಕ್ಕೆ ಧಕ್ಕೆಯಾಗಿದ್ದು ಪಕ್ಷದಲ್ಲಿ ಉಳಿಯುವುದು ಸಾಧ್ಯವಿಲ್ಲ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಸಂಪರ್ಕಿಸಿದ್ದು ಅತುರಾತುರವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಮೊದಲು ಪಕ್ಷಕ್ಕೆ ರಾಜೀನಾಮೆ, ಅನಂತರ ಸ್ವತಂತ್ರನಾಗಿ ಮುಂದಿನ ಕ್ರಮದ ಬಗ್ಗೆ ಯೋಚಿಸುವೆ ಎಂದು ತಿಳಿಸಿದರು.

 

Leave a Reply

comments

Related Articles

error: