ಮೈಸೂರು

ಬಡತನ ಸಹಿಸಬಹುದು ಜಾತಿ ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ: ಮಾಜಿ ಸಚಿವ ಶ್ರೀನಿವಾಸ ಪ್ರಸಾದ್

ಇಪ್ಪತ್ತೊಂದನೆ ಶತಮಾನದಲ್ಲಿಯೂ ಸಂಕುಚಿತ ಜಾತಿ ಆಧಾರಿತ ಸಮಾಜದಲ್ಲಿದ್ದೇವೆ ಎನ್ನುವುದೇ ಬಹು ಆಘಾತಕಾರಿ ಸಂಗತಿಯಾಗಿದೆ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ನೊಂದು ನುಡಿದರು.

ಅವರು ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಆವರಣದಲ್ಲಿಂದು (ಅ.14) ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಿಂದ ಡಾ.ಅಂಬೇಡ್ಕರ್ ಅವರ 60ನೇ ವರ್ಷದ ದಮ್ಮ ದೀಕ್ಷಾ ಸ್ಮರಣೆಯಂಗವಾಗಿ ಏರ್ಪಡಿಸಿದ್ದ ‘ಬೌದ್ಧ ಸಂಸ್ಕೃತಿಯ ಅನನ್ಯತೆ’ ವಿಶೇಷ ಉಪನ್ಯಾಸ ಹಾಗೂ ಮುಕ್ತ ಸಂವಾದವನ್ನು ಉದ್ಘಾಟಿಸಿ ಮಾತನಾಡಿದರು. ವೈಜ್ಞಾನಿಕ ಯುಗದಲ್ಲಿಯೂ ಅಸಮಾನತೆ, ಶೋಷಣೆ, ದಬ್ಬಾಳಿಕೆ, ಬಡತನ ಎಂಬುದು ಇಂದಿಗೂ ಜೀವಂತವಾಗಿದ್ದು ಶೇ.39ರಷ್ಟು ಮಕ್ಕಳು ಹಸಿವಿನಲ್ಲಿದ್ದಾರೆ, ಇವರಲ್ಲಿ ದಲಿತರ ಪ್ರಮಾಣವೇ ಹೆಚ್ಚು. ಬಡತನ ಸಹಿಸಬಹುದು ಜಾತಿ ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಆಶಯವು ಕನಸಾಗಿಯೇ ಉಳಿದಿದೆ. ಜಾತಿ ಸಂರ್ಘಷದಿಂದ ಬಹುವಾಗಿ ನಲುಗಿದ ಅವರು 1958ರ ಅ.14ರಂದು ಸರ್ವ ಸಮಾನತೆ ಬೀರುವ ಬೌದ್ಧ ಧರ್ಮಕ್ಕೆ ಸೇರ್ಪಡೆಯಾದರು. ಜಗತ್ತಿನಲ್ಲಿಯೇ ತತ್ವಾದರ್ಶ ಪ್ರಾಯರಾಗಿದ್ದು ಅತಿ ಹೆಚ್ಚು ವಿದ್ಯಾಭ್ಯಾಸ ಪಡೆದಿದ್ದರು. ಕಾಲಾನಂತರ ಅವರ ಸಾಮಾಜಿಕ ಸಮಾನತೆ ಹಾಗೂ ಜಾತ್ಯಾತೀತ ವಾದವನ್ನು ವಿಶ್ವವೇ ಮನ್ನಿಸಿ ಪುರಸ್ಕರಿಸುತ್ತಿದೆ. ಸ್ವಾತಂತ್ರ್ಯವಿಲ್ಲದೇ ಸಹಧರ್ಮಿಯರೊಂದಿಗೆ ಬದುಕುವುದು ದುಸ್ತರ, ಧರ್ಮವಿಲ್ಲದೇ ಬದುಕಲು ಸಾಧ್ಯವಿಲ್ಲ. ಅಂಬೇಡ್ಕರ್ ಎಲ್ಲಾ ಧರ್ಮ ಗ್ರಂಥಗಳನ್ನು ಆಳವಾಗಿ ಆಭ್ಯಾಸ ನಡೆಸಿ ಯಾವ ಧರ್ಮವನ್ನು ವಿರೋಧಿಸದೆ ಬೌದ್ಧ ಧರ್ಮಕ್ಕೆ ಸೇರ್ಪಡೆಯಾದರು.

ದಲಿತರು ಮದ್ಯವ್ಯಸನದಿಂದ ದೂರಾಗಿರಿ, ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಿ, ಜೀವನದಲ್ಲಿ ಕುಟುಂಬ ಕಲ್ಯಾಣ ಯೋಜನೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಲ್ಲಿ ದಲಿತರು ಮುಂದಿನ ಇಪ್ಪತ್ತು ವರ್ಷದಲ್ಲಿಯೇ ಅತ್ಯಂತ ಮುಂದುವರೆದ ಸಮೂಹವಾಗುವುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ದಲಿತನು ಮುನ್ನಡಿಯಿಡಬೇಕು ಎಂದು ತಿಳಿಸಿ ವಿದ್ಯಾರ್ಥಿಗಳು ಸಾಮಾಜಿಕ ಚಿಂತನಾ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರುವುದು ನೋವಿನ ಸಂಗತಿ. ಶಿಸ್ತಿನ ಕೊರತೆ, ಗ್ರಂಥಾಲಯದಿಂದ ದೂರವಿರುವರು, ಯಾವ ವಿಷಯ ಗ್ರಹಿಸಬೇಕು, ಚೈತನ್ಯ ಪಡೆಯದು ಪ್ರೇರಿತರಾಗಬೇಕು ಎನ್ನುವ ಪ್ರೌಢಿಮೆಯು  ವಿದ್ಯಾರ್ಥಿಗಳಲ್ಲಿ ಕಾಣುತ್ತಿಲ್ಲ ಎಂದು ಖೇಧ ವ್ಯಕ್ತಪಡಿಸಿ, ಡಾ.ಅಂಬೇಡ್ಕರ್ ಅವರ ತತ್ವ ಆದರ್ಶವನ್ನು ಪಾಲಿಸುವ ಮೂಲಕ ಪ್ರೇರಿತರಾಗಿಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ಗೋಪಾಲ್ ಪ್ರಾರ್ಥಿಸಿದರು. ಚಂದ್ರಗುಪ್ತ ಸ್ವಾಗತಿಸಿದರು.

 

Leave a Reply

comments

Related Articles

error: