ಮೈಸೂರು

ಇಂಜಿನಿಯರ್‍ಗಳ ವರ್ಗಾವಣೆ ಆಗ್ರಹ

ಮೈಸೂರು ನಗರದ ಹಂಚ್ಯಾ ಸಾತಗಳ್ಳಿ ಬಡಾವಣೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಜೆ ನರ್ಮ್ ಯೋಜನೆಯಡಿ ನಿರ್ಮಾಣವಾಗಿರುವ ಬಿ.ಬಿ. ಕೇರಿಯಲ್ಲಿ 60 ಪೌರಕಾರ್ಮಿಕ ಫಲಾನುಭವಿಗಳಿಗೆ ಕೇಂದ್ರ ಕಚೇರಿಯ ಪಟ್ಟಿಯಲ್ಲಿ ಮನೆ ಅನುಮೋದನೆಯಾಗಿದೆ. ಅವರಿಂದ ಡಿ.ಡಿ. ಪಾವತಿಸಿಕೊಂಡು ಮನೆ ನೀಡದೆ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿ ಅನ್ಯಾಯ ಮಾಡುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಸಹಾಯಕ ಇಂಜಿನಿಯರ್ ಮಹದೇವರನ್ನು ವರ್ಗಾಯಿಸಿ, ತನಿಖೆಗೆ ಒಳಪಡಿಸಿ ಎಂದು ಅರ್ಹ ಫಲಾನುಭವಿಗಳು ಆಗ್ರಹಿಸಿದ್ದಾರೆ.

ನರ್ಮ್ ಯೋಜನೆಯಡಿ 60 ಫಲಾನುಭವಿಗಳಿಗೆ ಮನೆ ಅನುಮೋದನೆಯಾಗಿದೆ. ಎಲ್ಲರಿಂದಲೂ ಡಿಡಿ ಪಾವತಿಸಿಕೊಳ್ಳಲಾಗಿದೆ. ಆದರೆ ಇನ್ನೂ 27 ಫಲಾನುಭವಿಗಳಿಗೆ ಸೂರು ಸಿಕ್ಕಿಲ್ಲ. ಇತ್ತ ವಾಸಿಸಲು ಗುಡಿಸಲೂ ಇಲ್ಲದೇ ಪರದಾಡುತ್ತಿದ್ದಾರೆ. ಜುಲೈ 18ರಂದು ಮಂಡಳಿಯ ಕಚೇರಿಯ ಗೋಡೆಯಲ್ಲಿ ಅಂತಿಮ ಪ್ರಕಟಣೆಯನ್ನು ಪ್ರಕಟಿಸಿದ್ದು, ಅದರಲ್ಲಿ 15 ಫಲಾನುಭವಿಗಳನ್ನು ಪಾವತಿಸಿದ ಡಿಡಿ ವಾಪಸ್ ಪಡೆಯುವಂತೆ ತಿಳಿಸಲಾಗಿದೆ. ಈಗಾಗಲೇ ಡಿಡಿ ಪಾವತಿಸಿಕೊಂಡಿರುವ ಎಲ್ಲ ಫಲಾನುಭವಿಗಳಿಗೂ ಮನೆ ಹಂಚಿಕೆ ಮಾಡಬೇಕೆಂದು ಕೋರಿ ಜಿಲ್ಲಾಧಿಕಾರಿಯವರಿಗೆ, ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದ್ದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಸರ್ಕಾರ ಹಾಗೂ ಕೆ.ಎಸ್.ಡಿ.ಬಿ ಆಯುಕ್ತರು ಅನ್ಯಾಯದ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಡಕುಟುಂಬದವರಿಗೆ ಮನೆ ಒದಗಿಸಿಕೊಡಬೇಕೆಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.

Leave a Reply

comments

Related Articles

error: