ಮೈಸೂರು

ಸಾಧಿಸುವ ಛಲ ಹಾಗೂ ಸಾಧನೆ ವಿದ್ಯಾರ್ಥಿಗಳಿಗಿರಬೇಕು : ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ ಕರೆ

ಮೈಸೂರು.ಜು.6 : ವಿಶ್ವಪ್ರಜ್ಞ ಪಿಯು ಕಾಲೇಜಿನ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನೆ ಈಚೆಗೆ ಜರುಗಿತು.

ಕಾರ್ಯಕ್ರಮದಲ್ಲಿ ಮೈಸೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ ಪಾಲ್ಗೊಂಡು ಮಾತನಾಡಿ, ಯುವ ಜನರಲ್ಲಿ ಶಿಸ್ತು ಬಹಳ ಮುಖ್ಯ, ನಿಮ್ಮ ನಡೆನುಡಿ, ಆಚಾರ, ವಿಚಾರಗಳು ಇಂದಿನ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಬೇಕೆಂದು ಆಶಿಸಿದರು.

ನಗರದ ದಟ್ಟಗಳ್ಳಿಯಲ್ಲಿರುವ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಸಾಧಿಸುವ ಛಲ ಹಾಗೂ ಅದಕ್ಕೆ ಬೇಕಾದ ಸಾಧನೆ ಅತಿ ಅವಶ್ಯ, ಭಯವನ್ನು ದೂರ ಮಾಡಿ, ತಪ್ಪುಗಳು ಕಂಡು ಬಂದರೇ ಖಂಡಿಸುವ ಪ್ರವೃತ್ತಿಯನ್ನು ಬೆಳಸಿಕೊಳ್ಳಿ ಎಂದು ಕರೆ ನೀಡಿದರು.

ಕಾಲೇಜಿನ ಟ್ರಸ್ಟಿ ವಿಶ್ವನಾಥ್ ಶೇಷಾಚಲ, ನಗರ ಅಪರಾಧ ಘಟಕದ ಸಹಪೊಲೀಸ್ ಆಯುಕ್ತ ಗೋಪಾಲ ಸಿ, ಪತ್ರಕರ್ತ ರವಿಕುಮಾರ್, ಮನೋಹರ್, ಆಡಳಿತಾಧಿಕಾರಿ ಕೆಂಪೇಗೌಡ, ಪ್ರಾಂಶುಪಾಲೆ ಗೀತಾ ಮುತ್ತಪ್ಪ, ರಚನ್ ಅಪ್ಪಣಮಯ್ಯ ಹಾಗೂ ಕಾಲೇಜಿನ ಬೋಧಕ ವರ್ಗ, ವಿದ್ಯಾರ್ಥಿಗಳ ಪೋಷಕರು ಭಾಗಿಯಾಗಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: