ದೇಶಪ್ರಮುಖ ಸುದ್ದಿ

ರೈಫಲ್‍ನೊಂದಿಗೆ ಯೋಧ ನಾಪತ್ತೆ , ಉಗ್ರ ಸಂಘಟನೆ ಸೇರಿರುವ ಶಂಕೆ, ತೀವ್ರ ಶೋಧ

ಶ್ರೀನಗರ, ಜುಲೈ 6 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಸೇನಾ ಶಿಬಿರದಿಂದ ಯೋಧನೊಬ್ಬ ಶಸ್ತ್ರಾಸ್ತ್ರಗಳೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದ್ದು, ಈತನ ಪತ್ತೆಗಾಗಿ ಭಾರತೀಯ ಸೇನೆ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.

ಜನರಲ್ ಹೂರ್ ಅಹಮದ್ ನಿನ್ನೆ ತಡರಾತ್ರಿ ಮಿಲಿಟರಿ ಕ್ಯಾಂಪ್‍ನಿಂದ ನಾಪತ್ತೆಯಾಗಿರುವ ಕಾರಣ ಈತ ಬೇರೆ ಏನಾದರೂ ಅಪಾಯ ಸಂಭವಿಸಿದೆಯೋ ಅಥವಾ ಉಗ್ರನೊಂದಿಗೆ ಸೇರಿದ್ದಾನೆಯೋ ಎಂಬುದನ್ನು ಖಾತಿಪಡಿಸಿಕೊಳ್ಳಲು ಈತನನ್ನು ಪತ್ತೆ ಮಾಡಲು ಸೇನೆ ತೀವ್ರ ಶೋಧಕಾರ್ಯ ನಡೆಸುತ್ತಿದೆ. ಈತನೊಂದಿಗೆ ಎಕೆ-47 ರೈಫಲ್ ಮತ್ತು 3 ಮ್ಯಾಗಝೈನ್‍ಗಳೂ ಕಾಣವೆಯಾಗಿವೆ ಎಂದು ತಿಳಿದುಬಂದಿದೆ.
-ಎನ್.ಬಿ.

Leave a Reply

comments

Related Articles

error: