ಮನರಂಜನೆ

ಅತಿ ಶೀಘ್ರದಲ್ಲಿ ತೆರೆ ಮೇಲೆ ‘ಬಕಾಸುರ’

ಬೆಂಗಳೂರು, ಜು.6: ನವನೀತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಬಕಾಸುರ’ ಚಿತ್ರವು ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ 6-2=3 ಮತ್ತು ಕರ್ವ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನವನೀತ್ ಈ ಬಾರಿಯೂ ಸಹ ವಿಶೇಷ ಸಿನಿಮಾವನ್ನು ಪ್ರೇಕ್ಷಕರ ಮುಂದಿಡಲಿದ್ದಾರೆ. ಈ ಚಿತ್ರದ ಬಹುಪಾಲು ಚಿತ್ರೀಕರಣ ಪೂರ್ಣಗೊಂಡಿದ್ದು, ನವನೀತ್ ಈ ಚಿತ್ರದ ಕಥೆಯನ್ನೂ ಸಹ ಈ ಹಿಂದಿನಂತೆಯೇ ವಿಶೇಷವಾಗಿ ರಚಿಸಿದ್ದಾರಂತೆ.

ಕಥೆ ರೆಡಿ ಮಾಡಿಕೊಳ್ಳುವಾಗಲೇ ರವಿಚಂದ್ರನ್ ಅವರನ್ನೇ ಮನಸಲ್ಲಿಟ್ಟುಕೊಂಡು ಮುಖ್ಯ ಪಾತ್ರವೊಂದನ್ನು ರೂಪಿಸಿದ್ದಾರಂತೆ.   ಈ ಪಾತ್ರಕ್ಕೆ, ಒಂದಿಡೀ ಕಥೆಗೆ ಮನಸೋತ ರವಿಚಂದ್ರನ್ ಅವರು ಖುಷಿಪಟ್ಟುಕೊಂಡೇ ಆ ಪಾತ್ರಕ್ಕೆ ಜೀವ ತುಂಬಿದ್ದೂ ಆಗಿದೆ. ಹಾಗಾದರೆ ಈ ಚಿತ್ರದಲ್ಲಿ ರವಿಚಂದ್ರನ್ ಅವರದ್ದೇನು ಪಾತ್ರ ಎಂಬ ಕುತೂಹಲ ಸಹಜವೇ. ಇಲ್ಲಿ ರವಿಚಂದ್ರನ್ ಬಹು ದೊಡ್ಡ ಬ್ಯುಸಿನೆಸ್ ಮನ್ ಆಗಿ ನಟಿಸಿದ್ದಾರೆ.

ಆರ್ ಜೆ ರೋಹಿತ್ ಲಾಯರ್ ಆಗಿ ನಟಿಸಿದ್ದಾರೆ. ಗಾಂಧಾರಿ ಎಂಬ ಧಾರಾವಾಹಿಯ ಮೂಲಕ ಈಗಾಗಲೇ ಮನೆ ಮಾತಾಗಿರುವ ಕಾವ್ಯಾ ಗೌಡ ನಾಯಕಿಯಾಗಿ ಬಕಾಸುರನ ಮೂಲಕ ಸ್ಯಾಂಡಲ್ ವುಡ್ ಗೆ  ಎಂಟ್ರಿ ಕೊಟ್ಟಿದ್ದಾರೆ.  ಬಕಾಸುರ ಚಿತ್ರದ ಬಹು ಭಾಗದ ಚಿತ್ರೀಕರಣ ಮುಗಿದು, ಎರಡು ವಿಶೇಷವಾದ ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಸಜ್ಜಾಗುತ್ತಿದೆ. (ವರದಿ: ಎಲ್.ಜಿ)

Leave a Reply

comments

Related Articles

error: