ಮನರಂಜನೆ

ಪ್ಯಾರ್ ಗೆ ಆಗ್ಬುಟ್ಟೈತೆ..!

ದೇಶ(ನವದೆಹಲಿ)ಜು.6:-ಬಾಲಿವುಡ್ ನ ವಿವಾದಿತ, ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಜೊತೆ ಇರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು, ಫೋಟೋ ಅಂತಿಂಥದ್ದಲ್ಲ!.

ಕೆಲವು ದಿನಗಳ ಹಿಂದೆ ಸಾನಿಯಾ ಮಿರ್ಜಾ ಫೋಟೋ ಪೋಸ್ಟ್ ಮಾಡಿ ವಿವಾದಕ್ಕೆ ಸಿಲುಕಿದ್ದ ರಾಮ್ ಗೋಪಾಲ್ ವರ್ಮಾ ಚಿತ್ರ ನಿರ್ಮಾಪಕ ನಿರ್ದೇಶಕ ಅನುರಾಗ್ ಕಶ್ಯಪ್ ರನ್ನು ಗಟ್ಟಿಯಾಗಿ ತಬ್ಬಿ ಹಿಡಿದು ಮುತ್ತು ಕೊಡುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ‘ಯಾರಿಗೆ ಮಹಿಳೆಯರು ಇಷ್ಟವಾಗುವುದಿಲ್ಲವೋ ನನಗೆ ಅಂಥಹವರು ಇಷ್ಟವಿಲ್ಲ. ನನ್ನ ಮತ್ತು ಅನುರಾಗ್ ನಡುವಿನ ಕನೆಕ್ಟಿಂಗ್ ಪಾಯಿಂಟ್ ಏನೆಂದರೆ ನಾವಿಬ್ಬರೂ ಮಹಿಳೆಯರನ್ನು ಇಷ್ಟಪಡುತ್ತೇವೆ. ಈ ಮುತ್ತು  ನಮ್ಮ ಪ್ರೀತಿಯ ಪ್ರಮಾಣವಾಗಿದೆ’ ಎಂದು ಬರೆದಿದ್ದಾರಂತೆ.ಕೆಲವು ದಿನಗಳ ಹಿಂದೆಯೇ ಟ್ವೀಟರ್ ಬಿಟ್ಟಿರುವ ರಾಮ್ ಗೋಪಾಲ್ ವರ್ಮಾ ಇನ್ಸ್ಟಗ್ರಾಂನಲ್ಲಿ ಫೋಟೋ ಹರಿಯಬಿಟ್ಟಿದ್ದಾರೆ. ಒಟ್ಟಿನಲ್ಲಿ ರಾಮ್ ಗೋಪಾಲ್ ವರ್ಮಾ ಮತ್ತು ಅನುರಾಗ್ ಕಶ್ಯಪ್ ನಡುವೆ ಪ್ಯಾರ್ ಗೆ ಆಗ್ಬುಟ್ಟೈತೆ ಎನ್ನುತ್ತಿದ್ದಾರಂತೆ ಫೋಟೋ ನೋಡಿದವರು. (ಎಸ್.ಎಚ್)

Leave a Reply

comments

Related Articles

error: