ಕರ್ನಾಟಕ

ಜೆಡಿಎಸ್ ನಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ: ಎಚ್.ಡಿ.ದೇವೇಗೌಡ

ಬೆಂಗಳೂರು,ಜು.6- ಆಪರೇಷನ್ ಕಮಲದಿಂದ ನಮಗೆ ಅನುಭವ ಆಗಿದೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ನಿಧಾನವಾಗಿ ಬಿಡುಗಡೆಗೊಳಿಸಲು ತಿಳಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಮತ್ತು ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ನಮ್ಮ ಏಳೆಂಟು‌ ಅಭ್ಯರ್ಥಿಗಳನ್ನ ಆಪರೇಷನ್ ಮಾಡಿದ್ದರು. ಅದಕ್ಕೆ ಈಗ ಪಟ್ಟಿ ರಿಲೀಸ್ ಮಾಡೋದು ಬೇಡ ಎಂದಿದ್ದೇನೆ. ಒಂದೆರಡು ಜಿಲ್ಲೆ ಬಿಟ್ಟು ಎಲ್ಲ ಜಿಲ್ಲೆಯಲ್ಲೂ ನಮ್ಮ ಪಕ್ಷದಲ್ಲಿ ಪ್ರಬಲ, ಸಮರ್ಥ ಅಭ್ಯರ್ಥಿಗಳು ಇದ್ದಾರೆ ಎಂದರು.

ಸಭೆಯಲ್ಲಿ ಜೆಡಿಎಸ್ ವರಿಷ್ಠಧಿಕಾರಿ ಎಚ್.ಡಿ.ದೇವೇಗೌಡ, ಜೆಡಿಎಸ್ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ, ಮಾಜಿ ಸಚಿವ ಎಚ್.ವಿಶ್ವನಾಥ್, ಸಂಸದ ಪುಟ್ಟರಾಜು, ಶಾಸಕ ಮಧುಬಂಗಾರಪ್ಪ, ಬಿ.ಬಿ.ನಿಂಗಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಇತರರು ಇದ್ದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: