ಕರ್ನಾಟಕ

ಅಂಗವಿಕಲರ ಪುನರ್ವಸತಿ ಕೇಂದ್ರ : ಕಛೇರಿ ಸೇವಕರನ್ನು ಹೊರತುಪಡಿಸಿ ನೇಮಕಾತಿ

ಮೈಸೂರು, ಜುಲೈ 6 : ಮೈಸೂರಿನ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿಮಾಡಿಕೊಳ್ಳುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.

ಜಿಲ್ಲಾಧಿಕಾರಿಗಳು, ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕಛೇರಿ ಸೇವಕರನ್ನು ಮುಂದುವರೆಸಿಕೊಂಡು ಹೋಗಲು ಜೂನ್ 6 ರಂದು ಅನುಮೋದನೆ ಮತ್ತು ಆದೇಶದ ಹಿನ್ನೆಲೆಯಲ್ಲಿ ಕಛೇರಿ ಸೇವಕ ಹುದ್ದೆಯನ್ನು ಹೊರತುಪಡಿಸಿ, ಉಳಿದ ಎಲ್ಲಾ ಹುದ್ದೆಗಳನ್ನ ನಿಯಮಾನುಸಾರ ಮುಂದಿನ ಪ್ರಕ್ರಿಯೆಯನ್ನು ನಡೆಸಲಾಗುವುದೆಂದು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-ಎನ್.ಬಿ.

Leave a Reply

comments

Related Articles

error: