ಕ್ರೀಡೆ

ಚೆಸ್ ಲೋಕಕ್ಕೆ ರೀ ಎಂಟ್ರಿ ಕೊಡಲಿರೋ ಗ್ಯಾರಿ ಕ್ಯಾಸ್ಪರೋವ್

ಬೆಂಗಳೂರು,ಜು.6-ಚದುರಂಗ ಲೋಕಕ್ಕೆ 2005 ರಲ್ಲಿ ವಿದಾಯ ಹೇಳಿದ್ದ ಗ್ಯಾರಿ ಕ್ಯಾಸ್ಪರೋವ್ ಮತ್ತೆ ಚೆಸ್ ಲೋಕಕ್ಕೆ ವಾಪಾಸ್ಸಾಗುತ್ತಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಯುಎಸ್ ಟೂರ್ನಮೆಂಟ್ ನಲ್ಲಿ ಗ್ಯಾರಿ ಭಾಗವಹಿಸುವ ಮೂಲಕ ಚೆಸ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಸುಮಾರು 15 ವರ್ಷಕ್ಕೂ ಹೆಚ್ಚು ವಿಶ್ವ ಚೆಸ್ ಲೋಕವನ್ನು ಆಳಿದ್ದ ಗ್ಯಾರಿ ಚದುರಂಗ ಕ್ಷೇತ್ರದಲ್ಲಿರುವ ಅತ್ಯಂತ ಹಿರಿಯ ಆಟಗಾರ.

ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್, ಹೈಕರು ನಕುಮರಾ ಮುಂತಾದವರು ಈ ಟೂರ್ನಮೆಂಟ್ ನಲ್ಲಿ ಆಡಲಿದ್ದಾರೆ.

ಗ್ಯಾರಿ ತಮ್ಮ 22ನೇ ವಯಸ್ಸಿನಲ್ಲೇ ಸೋವಿಯೆಟ್ ನ ಗ್ರ್ಯಾನ್ ಮಾಸ್ಟರ್ ಅನತೋಲಿ ಕಾರ್ಪೊವ್ ಅವರನ್ನು ಸೋಲಿಸುವ ಮೂಲಕ ಸ್ಟಾರ್ ಆಗಿ ಬೆಳೆದರಲ್ಲದೆ, ವಿಶ್ವ ಚದುರಂಗ ಕ್ಷೇತ್ರದಲ್ಲಿ ಅನೇಕ ವರ್ಷಗಳ ಕಾಲ ಮಿಂಚಿದ್ದರು. (ವರದಿ-ಎಂ.ಎನ್)

 

Leave a Reply

comments

Related Articles

error: