ಮೈಸೂರು

ಅನ್ಯೋನ್ಯತೆಯಿಂದ ಸಹಬಾಳ್ವೆ ನಡೆಸುವ ಮೂಲಕ ಬುದ್ಧನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಬಿ.ವಿ. ಜವರೇಗೌಡ

ಮೈಸೂರು(ಬೈಲಕುಪ್ಪೆ)ಜು.6:- ಟಿಬೇಟನ್ ನಿರಾಶ್ರಿತರು ಸ್ಥಳಿಯರೊಂದಿಗೆ ಅನ್ಯೋನ್ಯತೆಯಿಂದ ಸಹಬಾಳ್ವೆ ನಡೆಸುವ ಮೂಲಕ ಬುದ್ಧನ ತತ್ವವನ್ನು ನಿಜ ಜೀವನದಲ್ಲಿ ಆಳವಡಿಸಿಕೊಳ್ಳುವ ಯತ್ನ ಮಾಡಬೇಕು  ಎಂದು ಬೈಲಕುಪ್ಪೆಯ ಇಂಡೊ – ಟಿಬೆಟನ್  ಫ್ರೆಂಡ್ಸ್ ಶಿಪ್ ಸಂಘದ ಅಧ್ಯಕ್ಷ ಬಿ.ವಿ. ಜವರೇಗೌಡ    ಕರೆ ನೀಡಿದರು.

ಅವರು ಗ್ರಾಮದ ಟಿಬೇಟನ್ ಕಾಲೋನಿಯ ಮೊದಲನೆ ಕ್ಯಾಂಪಿನ ನ್ಯಾಮ್ರಡೋಲ್ ಸಮುದಾಯ ಭವನದಲ್ಲಿ ಗುರುವಾರ ಟಿಬೇಟನ್ ಧರ್ಮಗುರು ದಲೈಲಾಮರ 82ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ಧ ಕಾರ್ಯಕ್ರಮದಲ್ಲಿ  ಮಾತನಾಡಿದರು, ಟಿಬೇಟನ್ ನಿರಾಶ್ರಿತರು ದಲೈಲಾಮರ ಮೇಲಿಟ್ಟಿರುವ ಗೌರವ, ಪ್ರೀತಿ ನಿಜಕ್ಕೂ ಶ್ಲಾಘನೀಯ ಅವರ ಮೇಲಿನ ಈ ಪ್ರೀತಿ ವಿಶ್ವಾಸ ಅವರು ನೂರ್ಕಾಲ ಬಾಳಲು ಸಹಕಾರಿಯಾಗಲಿ ಎಂದು ಅಭಿಪ್ರಾಯಪಟ್ಟರು, ದಲೈಲಾಮ ಜನ್ಮದಿನದ ಅಂಗವಾಗಿ ಮಂಚದೇವನಹಳ್ಳಿ ಸಮೀಪದ ಕರುಣ ಹೋಂ ಅಂದ ಮಕ್ಕಳು ಸೇರಿದಂತೆ  ಸಿಎಸ್‍ಟಿ ಮತ್ತು ಎಸ್ ಒ ಎಸ್ ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಲಾಯಿತು,  ಕಾರ್ಯಕ್ರಮದಲ್ಲಿ ಎ.ಎ. ಚಂಗಪ್ಪ, ಗೆಲಾಖ್, ಸಿಎಸ್‍ಟಿ ಶಾಲೆಯ ಪ್ರಾಂಶುಪಾಲ ಸಿಂಡ್ರಿಯಾಲ್,   ಟಿಬೇಟಿಯನ್ ಪದಾಧಿಕಾರಿಗಳು ಸೇರಿದಂತೆ ಹಲವಾರು ಟಿಬೇಟಿಯನ್ನರು ಪಾಲ್ಗೊಂಡಿದ್ದರು. (ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: