ಮೈಸೂರು

ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ವಾರ್ಷಿಕ ಮಹಾಸಭೆ

ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 21ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.

ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪ್ಲೊಮ, ಸಂಗೀತ, ನೃತ್ಯ ಮತ್ತು ಇತರ ಚಟುವಟಿಕೆಗಳಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ರಾಜ್ಯಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಪ್ರಥಮ ಬಹುಮಾನ ಪಡೆದ ಸದಸ್ಯರ ಮಕ್ಕಳನ್ನೂ ಸನ್ಮಾನಿಸಲಾಯಿತು.

ಸಂಘದ ಹಿರಿಯ ಸದಸ್ಯ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಅಪಘಾತ ರಹಿತ ಮೋಟಾರು ವಾಹನ ಚಾಲನಾ ಸೇವೆಗಾಗಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದ ಎನ್.ಪಾರ್ಥಸಾರಥಿ ಹಾಗೂ ರಾಜ್ಯ ಮಾಧ್ಯಮ ಅಕಾಡೆಮಿ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ್ದಕ್ಕೆ ಗೌರವಪೂರ್ವಕವಾಗಿ ನೀಡುವ ಪ್ರಶಸ್ತಿ ಪತ್ರಕ್ಕೆ ಭಾಜನರಾಗಿರುವ ಟಿ.ವಿ.ರಾಜೇಶ್ವರ, ಸಂಘದ ಉಪಾಧ್ಯಕ್ಷ ಎನ್.ಎಸ್.ಮುರಳಿ, ನಿರ್ದೇಶಕ ಕೆ.ನಾಗರಾಜ, ವಿ.ಎನ್ ಕೃಷ್ಣ, ಎಚ್.ಎಸ್.ಪ್ರಶಾಂತ ತಾತಾಚಾರ್, ಎಚ್.ಎಸ್. ಕೃಪರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಸ್. ರಾಮಕೃಷ್ಣ, ಖಜಾಂಚಿ ಎಂ.ಎಸ್.ವೆಂಕಟೇಶ್, ನಿರ್ದೇಶಕರಾದ ಸಿ.ವಿ.ಪಾರ್ಥಸಾರಥಿ, ಎಂ.ಡಿ.ಗೋಪಿನಾಥ್, ಎಂ.ಆರ್.ಬಾಲಕೃಷ್ಣ, ಎಂ.ಆರ್. ಕೇಶವಪ್ರಸಾದ್, ಕೆ.ನಾಗರಾಜ, ಕೆ.ಎನ್. ಅರುಣ್, ರೇಖಾ, ಕಾನೂನು ಸಲಹೆಗಾರ ಶಶಿಧರ್, ಆಂತರಿಕ ಲೆಕ್ಕ ಪರಿಶೋಧಕ ಬಿ.ಎಲ್.ವೆಂಕಟನರಸಿಂಹನ್, ಕಾರ್ಯದರ್ಶಿ ಎನ್.ಕೇಶವಚಂದ್ರ ಉಪಸ್ಥಿತರಿದ್ದರು.

Leave a Reply

comments

Related Articles

error: