ಸುದ್ದಿ ಸಂಕ್ಷಿಪ್ತ

ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮ ದಿನಾಚರಣೆ

ಮಡಿಕೇರಿ, ಜು.6: ಭಾರತ ಸರ್ಕಾರ, ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ತಾಲ್ಲೂಕು ಯುವ ಒಕ್ಕೂಟ, ಗಾಳಿಬೀಡು ಯುವಕ ಸಂಘ, ಇವರ ಸಂಯುಕ್ತ ಆಶ್ರಯದಲ್ಲಿ ಯವ ಸಂಘಗಳ ಸಧೃಡ ಕಾರ್ಯಕ್ರಮದ ಉದ್ಘಾಟನೆ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮ ದಿನಾಚರಣೆಯು ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜು ಅವರು ಯುವ ಸಂಘಗಳ ಕಾರ್ಯ ಚಟುವಟಿಕೆ ಹಾಗೂ ರಚನೆ ಯುವ ಸಂಘಗಳನ್ನು ಸಧೃಡ ಮಾಡುವುದರ ಬಗ್ಗೆ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜೀವನ ವ್ಯಕ್ತಿತ್ವ ಮತ್ತು ಮೌಲ್ಯಗಳ ಕುರಿತು ತಿಳಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಎಂ.ಬಿ.ಜೋಯಪ್ಪ ಕಾರ್ಯಕ್ರಮದ ಕುರಿತು ಮಾತನಾಡಿದರು.

ತಾಲ್ಲೂಕು ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಯುವ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾದ ಗಿರೀಶ್ ತಾಳತ್ಮನೆ, ತಾಲ್ಲೂಕಿನ ವಿವಿಧ ಸಂಘಗಳಿಂದ ಆಗಮಿಸಿದ 52 ಮಂದಿ ಹಾಗೂ ನೆಹರು ಯುವ ಕೇಂದ್ರದ ಕಾರ್ಯಕರ್ತರಾದ ದೀಪ ಎಚ್.ಎಸ್, ರವೀಂದ್ರ ಎಚ್.ವಿ., ವಿವೇಕ ಎಂ.ಬಿ, ಪ್ರೀಯಾ ಮತ್ತು ಸುಮಿತ್ರ ಇವರುಗಳು ಪಾಲ್ಗೊಂಡಿದ್ದರು.

ಯುವ  ಸಂಘಗಳ ಸಧೃಡ ಕಾರ್ಯಕ್ರಮವನ್ನು ಜುಲೈ, 10 ರಿಂದ ಜುಲೈ, 12 ರವರೆಗೆ ವೀರಾಜಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಅವರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: