ಮೈಸೂರು

ಬ್ರೈಲ್ ಮುದ್ರಣ ಕೊಡುಗೆ ನೀಡಿದ ಕಿರಣ್ ರಂಗ

ಮೈಸೂರು,ಜು.7-ನಗರದ ಶಾರದದೇವಿ ನಗರದಲ್ಲಿರುವ ಲೂಯಿ ಬ್ರೈಲ್ ಚಾರಿಟಬಲ್ ಟ್ರಸ್ಟ್ ಗೆ ಮೈಸೂರು ಅಮಿಟಿ ರೌಂಡ್ ಟೇಬಲ್ 156, (MART 156) ಅಧ್ಯಕ್ಷ ಕಿರಣ್ ರಂಗ ಬ್ರೈಲ್ ಮುದ್ರಣವನ್ನು ಕೊಡುಗೆಯಾಗಿ ನೀಡಿದ್ದಾರೆ.

ಟ್ರಸ್ಟ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುದ್ರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಯಂತ್ರದಿಂದ ಎಲ್ಲರಿಗೂ ಉಪಯೋಗವಾಗಬೇಕು. ಆಗ ಮಾತ್ರ ನಾವು ಮಾಡಿದ ಸೇವಾ ಕಾರ್ಯಕ್ಕೆ ಅರ್ಥ ಸಿಗುತ್ತದೆ ಎಂದರು.

ಲೂಯಿ ಬ್ರೈಲ್ ಸಂಸ್ಥೆಯ ಮುಖ್ಯಸ್ಥ ಯೋಗೇಶ್ ಮಾತನಾಡಿ, ನಾವು ಈ ಸಹಾಯವನ್ನ ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ. ನೂರಾರು ಅಂಧ ವಿದ್ಯಾರ್ಥಿಗಳಿಗೆ ಇದು ಉಪಯೋಗವಾಗುತ್ತದೆ ಎಂದರು.

ಯು.ಪಿ.ಎಸ್.ಸಿ ರ್ಯಾಂಕ್ ವಿಜೇತ್ ಕೆಂಪ ಹೊನ್ನಯ್ಯ ಬ್ರೈಲ್ ಲಿಪಿ ಓದುವುದರ ಮೂಲಕ ಕಾರ್ಯಕ್ರಮಕ್ಕೆ ಅರ್ಥ ಕಲ್ಪಿಸಿದರು.

ಇದೇ ವೇಳೆ ಲೂಯಿಬ್ರೈಲ್ ಸಂಸ್ಥೆಯ ಸ್ವಯಂ ಸೇವಕರು ಇತರರು ಉಪಸ್ಥಿತರಿದ್ದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: