ಮನರಂಜನೆ

ಚಿತ್ರರಂಗದ ಪಾತ್ರಕ್ಕಾಗಿ ಮಂಚ ಪದ್ಧತಿ: ಇಲಿಯಾನಾ ಬೋಲ್ಡೆಸ್ಟ್ ಹೇಳಿಕೆ

ಮುಂಬೈ, ಜುಲೈ.7: ಇತ್ತೀಚೆಗೆ ಲಂಡನ್`ನಲ್ಲಿ ಮುಬರಕನ್ ಚಿತ್ರದ ಶೂಟಿಂಗ್ ವೇಳೆ ಬ್ರೇಕ್ ಡೌನ್ ಬಗ್ಗೆ ಇಲಿಯಾನಾ ಹೇಳಿಕೊಂಡಿದ್ದಾರೆ. ಬಾಲಿವುಡ್`ನ ಬಿಗ್ ಸ್ಟಾರ್`ಗಳ ಜೊತೆ ನಟಿಯರು ಫ್ಲರ್ಟ್(ಲಲ್ಲೆ) ಮಾಡಿದರೆ ಹೇಗೆ ಉನ್ನತಿ ಹೊಂದಬಹುದು ಎಂಬ ನಗ್ನ ಸತ್ಯವನ್ನು ಹೊರಹಾಕಿದ್ದಾರೆ.
ದಕ್ಷಿಣ ಭಾರತದ ಬೋಲ್ಡೆಸ್ಟ್ ನಟಿಯರಲ್ಲೊಬ್ಬರಾದ ಇಲಿಯಾನಾ ಡಿಕ್ರೂಜ್ ಇತ್ತೀಚಿನ ಸಂದರ್ಶನವೊಂದರಲ್ಲಿ ಪರೋಕ್ಷವಾಗಿ ಚಿತ್ರರಂಗದ ಪಾತ್ರಕ್ಕಾಗಿ ಮಂಚ ಪದ್ಧತಿಯ ಬೋಲ್ಡೆಸ್ಟ್ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಶೂಟಿಂಗ್ ವೇಳೆ ನಟರು ನಮ್ಮ ಜೊತೆ ಫ್ಲರ್ಟ್(ಲಲ್ಲೆ) ಮಾಡುತ್ತಾರೆ. ನಾವೂ ಸಹ ಅದೇರೀತಿ ಫ್ಲರ್ಟ್ ಮಾಡಿದರೆ ನಾವು ಖಂಡಿತಾ ಚಿತ್ರರಂಗದಲ್ಲಿ ಬೇರೂರುತ್ತೇವೆ. ನಟನು ಕರೆದಾಗ ಅವನ ಮನೆಗೆ ಡ್ರಿಂಕ್ಸ್ ಪಾರ್ಟಿಗೆ ಹೋದರೆ ಖಂಡಿತಾ ಅವನ ಜೊತೆ ಮತ್ತೊಂದು ಚಿತ್ರದಲ್ಲಿ ಅವಕಾಶ ಸಿಗುತ್ತೆ. ನನಗೆ ಆ ರೀತಿ ಮಾಡುವುದು ಬೇಕಿಲ್ಲ.  ನಾನೊಬ್ಬಳು ಪ್ರತಿಭಾವಂತ ನಟಿಯಾಗಿ ನಾನ್ಯಾಕೆ ಅದನ್ನು ಮಾಡಬೇಕು..? ನನ್ನ ಪ್ರತಿಭೆಗೆ ಅವಕಾಶ ಸಿಗುತ್ತೆ. ಇದರಿಂದಲೇ ಲಂಡನ್`ನಲ್ಲಿ ಮುಭಾರಕ್ ಶೂಟಿಂಗ್ ವೇಳೆ ನಾನು ಬ್ರೇಕ್ ಡೌನ್ ಆಗಿದ್ದೆ ಎಂದು ಹೇಳಿಕೊಂಡಿದ್ಧಾರೆ. (ಪಿ.ಜೆ)

Leave a Reply

comments

Related Articles

error: