ಮನರಂಜನೆ

‘ಫಸ್ಟ್ ಲವ್’ ಚಿತ್ರದ ಟೀಸರ್ ರಿಲೀಸ್

ಬೆಂಗಳೂರು, ಜು.7: 91.1 ರೇಟಿಯೋ ಸಿಟಿಯ ಲವ್ ಗುರು ಷೋ ಮೂಲಕ ತನ್ನ ಧ್ವನಿಯಲ್ಲೇ  ಪ್ರೇಮಿಗಳ ಮನಸ್ಸು ಕದ್ದಿದ್ದ  ಆರ್ ಜೆ ರಾಜೇಶ್ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈತ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ ‘ಫಸ್ಟ್ ಲವ್’.

ಈಗ ‘ಫಸ್ಟ್ ಲವ್’ ಚಿತ್ರದ  ಟೀಸರ್ ರಿಲೀಸ್ ಆಗಿದೆ. ಟೀಸರ್ ರಿಲೀಸ್ ಮಾಡಿರುವ ನಟಿ ಪ್ರೇಮಾ ಶುಭ ಹಾರೈಸಿದ್ದಾರೆ. ಹೊಸ ಪ್ರೇಮಕಥೆ ಹೊಂದಿರುವ ಚಿತ್ರ ಇದಾಗಿದೆ.  ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಟನೆಯಲ್ಲಿ ತೊಡಗಿದ್ದ ಕವಿತಾಗೌಡ ಈಗ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಡುತ್ತಿದ್ದು,  ನಾಯಕಿಯಾಗಿ ನಟಿಸಿದ್ದಾರೆ.  ಸ್ನೇಹ ನಾಯರ್ ಕೂಡಾ ಈ ಚಿತ್ರದಲ್ಲಿ ಎರಡನೆಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟ ರಾಜು ತಾಳಿಕೋಟೆ ಸಹ ಅಭಿನಯಿಸಿದ್ದಾರೆ.

ಮಲ್ಲಿಕಾರ್ಜುನ್ ಅವರು ಮೊದಲ ನಿರ್ದೇಶನದ ಚಿತ್ರ ಇದಾಗಿದ್ದು, ಶ್ರೀಧರ.ವಿ.ಸಂಭ್ರಮ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.  ಅಶೋಕ. ವಿ.ಲಮಾಣಿ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರ ತಂಡ ಹಾಕಿಕೊಂಡಿದೆ. ಚಿತ್ರದ ಪ್ರಮೋಷನ್ ಸಹ ನಡೆಸಲಾಗುತ್ತಿದೆ. (ವರದಿ: ಎಲ್.ಜಿ)

Leave a Reply

comments

Related Articles

error: