ಮನರಂಜನೆ

ಜಲೈ 12 ಕ್ಕೆ ‘ಮುಗುಳುನಗೆ’ ಚಿತ್ರದ ಆಡಿಯೋ ರಿಲೀಸ್

ಬೆಂಗಳೂರು, ಜು.7:  ಇದೇ ಜುಲೈ 12 ರಂದು  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಮುಗುಳುನಗೆ’ ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿ  ಬಂದಿರುವ  ಈ ಚಿತ್ರದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಜಿ.ಎಸ್.ಟಿ. ಬಗೆಗಿನ ಹೊಡಿ ಒಂಭತ್ತು ಎಂಬ ಹಾಡೊಂದನ್ನು ಸಹ ಬರೆದಿದ್ದು, ಸಖತ್ ಫೇಮಸ್ ಆಗಿದೆ. ಈ ಹಾಡನ್ನು ವಿ. ಹರಿಕೃಷ್ಣ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದುನಿಯಾ ವಿಜಯ್ ಹಾಡಿದ್ದಾರೆ.

ಮುಗುಳುನಗೆ ಸಿನಿಮಾದ ಆಡಿಯೋ ಹಕ್ಕುಗಳನ್ನು “ಡಿ ಬಿಟ್ಸ್ ” ಖರೀದಿಸಿದೆ. ಗೋಲ್ಡನ್ ಸ್ಟಾರ್ ಗಣೇಶ್, ಅಪೂರ್ವ, ಆಶಿಕಾ, ಅಮೂಲ್ಯ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಮುಂಗಾರು ಮಳೆ, ಗಾಳಿಪಟ, ನಂತರ ಗಣೇಶ ಮತ್ತು ಭಟ್ಟರು ಮತ್ತೆ ಯಾವ ರೀತಿಯಲ್ಲಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. (ವರದಿ: ಎಲ್.ಜಿ)

Leave a Reply

comments

Related Articles

error: