ಕರ್ನಾಟಕಪ್ರಮುಖ ಸುದ್ದಿಮೈಸೂರು

ದಸರಾ ಉದ್ಘಾಟಿಸಲು ಕವಿ ಚೆನ್ನವೀರ ಕಣವಿ ಅವರಿಗೆ ಸೆ.4ರಂದು ಅಧಿಕೃತ ಆಹ್ವಾನ

ಕವಿ ಚೆನ್ನವೀರ ಕಣವಿ
ಕವಿ ಚೆನ್ನವೀರ ಕಣವಿ

ಹೊಸಗನ್ನಡ ಕಾವ್ಯದ ಪ್ರಮುಖ ಕವಿ, ವಿದ್ವಾಂಸ ಚೆನ್ನವೀರ ಕಣವಿ ಅವರು ಈ ಬಾರಿಯ ದಸರಾ ಉದ್ಘಾಟಿಸಲಿದ್ದು, ಸೆಪ್ಟಂಬರ್ 4ರಂದು ಅವರನ್ನು ಅಧಿಕೃತವಾಗಿ ಆಹ್ವಾನಿಸಲು ದಸರಾ ಉತ್ಸವ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಿತಿಯ ಅಧ್ಯಕ್ಷ ಎಚ್‍.ಸಿ. ಮಹದೇವಪ್ಪ ಅವರು, “ಮೇಯರ್ ಬಿ.ಎಲ್. ಭೈರಪ್ಪ ಹಾಗೂ ಜಿಲ್ಲಾಧಿಕಾರಿ ಡಿ. ರಣದೀಪ್ ಅವರು ಧಾರವಾಡಕ್ಕೆ ತೆರಳಿ ಕವಿ ಚನ್ನವೀರ ಕಣವಿ ಅವರನ್ನು ಅಧಿಕೃತವಾಗಿ ದಸರಾ ಉದ್ಘಾಟನೆಗೆ ಆಹ್ವಾನಿಸಲಿದ್ದಾರೆ ಎಂದು ತಿಳಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಣದೀಪ್ ಅವರು, ಸೆಪ್ಟಂಬರ್ 3ರಂದೇ ನಾವು ಧಾರವಾಡಕ್ಕೆ ತೆರಳಿದ್ದೇವೆ. ಮರುದಿನ ಸೆ.4ರಂದು ಕವಿಗಳಿಗೆ ಅಧಿಕೃತ ಆಹ್ವಾನ ನೀಡಲಾಗುವುದು. ಅಕ್ಟೋಬರ್ 1ರಂದು ದಸರಾ ಕಾರ್ಯಕ್ರಮಗಳಿಗೆ ಚಾಮುಂಡಿ ಬೆಟ್ಟದಲ್ಲಿ ಅಧಿಕೃತ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

Leave a Reply

comments

Related Articles

error: