ದೇಶ

ಮಾಡೆಲ್ ಸೋನಿಕಾ ಚೌಹಾಣ್ ಅಪಘಾತ ಪ್ರಕರಣ :ನಟ ವಿಕ್ರಮ್ ಚಟರ್ಜಿ ಬಂಧನ

ಕೋಲ್ಕತಟಿವಿ ಆ್ಯಂಕರ್ ಮತ್ತು ಮಾಡೆಲ್  ಸೋನಿಕಾ ಚೌಹಾಣ್ ಅವರ ಸಾವಿಗೆ ಕಾರಣವಾದ ಕಾರು ಅಪಘಾತ  ಪ್ರಕರಣದಲ್ಲಿ  ನರಹತ್ಯೆಯ ಆರೋಪ ಎದುರಿಸುತ್ತಿದ್ದ ನಟ ವಿಕ್ರಮ್ ಚಟರ್ಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಟಿವಿ ಮತ್ತು ಚಿತ್ರ ನಟ ವಿಕ್ರಮ್ ಚಟರ್ಜಿ ಅವರನ್ನು  ದಕ್ಷಿಣ ಕೋಲ್ಕತದ ಕಸ್ಬಾ ಪ್ರದೇಶದಲ್ಲಿರುವ ರಾಶ್ಬೆಹಾರಿ ಅವೆನ್ಯೂ ಮಾರ್ಗದಲ್ಲಿನ ಆಯಕ್ರೋಪೊಲೀಸ್ ಮಾಲ್ ನಲ್ಲಿ  ಪೊಲೀಸರು ನಿನ್ನೆ ಮಧ್ಯರಾತ್ರಿಯ ವೇಳೆ ಬಂಧಿಸಿದರು. ಕಳೆದ ಎಪ್ರಿಲ್ 29ರಲ್ಲಿ ವಿಕ್ರಂ ಚಟರ್ಜಿ ಅತ್ಯಂತ ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಎಸಗಿದ ಅಪಘಾತದಲ್ಲಿ ಮಾಡೆಲ್ ಸೋನಿಕಾ ಮೃತಪಟ್ಟಿದ್ದರು. ಮಾಡೆಲ್ ಸೋನಿಕಾ ಚೌಹಾಣ್ ಸಾವಿಗೆ ಕಾರಣವಾದ ಕಾರು ಅಪಘಾತ ಎಸಗಿದ ಪ್ರಕರಣದಲ್ಲಿ ಪೊಲೀಸರು ತನ್ನ ವಿರುದ್ಧ “ಕೊಲೆಯಲ್ಲದ ನರಹತ್ಯೆ’ ಪ್ರಕರಣವನ್ನು ದಾಖಲಿಸಿಕೊಂಡದ್ದನ್ನು ಅನುಸರಿಸಿ ವಿಕ್ರಂ ಚಟರ್ಜಿ ತಲೆ ಮರೆಸಿಕೊಂಡಿದ್ದರು. (ಪಿ.ಜೆ)

 

Leave a Reply

comments

Related Articles

error: