ಕರ್ನಾಟಕಪ್ರಮುಖ ಸುದ್ದಿ

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿವಿಧ ವೃಂದಗಳ ಜೇಷ್ಠತಾ ಪಟ್ಟಿ ವೆಬ್‍ಸೈಟ್‍ನಲ್ಲಿ ಪ್ರಕಟ

ಬೆಂಗಳೂರು, ಜುಲೈ 7 : ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂ 2368/2011, ಶ್ರೀಮತಿ ಬಿ. ಕೆ. ಪವಿತ್ರ ಮತ್ತಿತರರು ವಿರುದ್ಧ ಯೂನಿಯನ್  ಆಫ್ ಇಂಡಿಯಾ ಪ್ರಕರಣದಲ್ಲಿ ದಿನಾಂಕ: 09-02-2017 ರಂದು ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ಹಾಗೂ ಸರ್ಕಾರದ ಆದೇಶ ಸಂ. ಸಿಆಸುಇ 182 ಎಸ್‍ಆರ್‍ಆರ್ 2011, ದಿನಾಂಕ: 06-05-2017 ರನ್ವಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಡಳಿತಾಧಿಕಾರಿ, ಅಧೀಕ್ಷಕ, ಪ್ರ.ದ.ಸ., ದ್ವಿ.ದ.ಸ., ಹಿರಿಯ ಬೆರಳ್ಚುಗಾರ, ಹಿರಿಯ ವಾಹನ ಚಾಲಕ, ಶೀಘ್ರಲಿಪಿಗಾರ, ಬೆರಳಚ್ಚುಗಾರ ಮತ್ತು ವಾಹನ ಚಾಲಕ ವೃಂದಗಳ ತಾತ್ಕಾಲಿಕ, ಪರಿಷ್ಕೃತ ಜೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಿ ಇಲಾಖೆಯ “www.karnatakapubliclibrary.gov.in” ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದ್ದು,  15 ದಿನಗಳೊಳಗಾಗಿ ಆಕ್ಷೇಪಣೆ/ಸಲಹೆಗಳಿದ್ದಲ್ಲಿ ಮೇಲ್ಕಾಣಿಸಿದ ವಿಳಾಸದ ಇಲಾಖೆಯ ನಿರ್ದೇಶಕರ ಕಚೇರಿ ಸಲ್ಲಿಸಬಹುದಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ತಿಳಿಸಿದೆ.

-ಎನ್.ಬಿ.

Leave a Reply

comments

Related Articles

error: