ಮೈಸೂರು

ಪರಿಸರದ ಸಮತೋಲನವನ್ನು ಕಾಪಾಡುವ ನಿಟ್ಟಿನಲ್ಲಿ ಸಸಿಗಳನ್ನು ನೆಡಲಾಗುತ್ತಿದೆ : ಪ್ರತಾಪ್ ಸಿಂಹ

ಮೈಸೂರು,ಜು.7:- ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಗೌರಿಶಂಕರ ಬಡಾವಣೆಯ ಬಳಿ ಸಸಿಗಳನ್ನು ನೆಡುವ ಅಭಿಯಾನಕ್ಕೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಪರಿಸರದ ಸಮತೋಲನವನ್ನು ಕಾಪಾಡುವ ನಿಟ್ಟಿನಲ್ಲಿ ಬಿಜೆಪಿ ಸಂಘಪರಿವಾರದ ವತಿಯಿಂದ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸಿಕೊಳ್ಳುವ ಅಗತ್ಯವಿಂದು ಹೆಚ್ಚಿದೆ ಎಂದರು.

ಇಲ್ಲಿ ಈಗ 60 ಸಸಿಗಳನ್ನು ನೆಡಲಾಗಿದ್ದು, ಬಿಜೆಪಿ ಸಂಘಪರಿವಾರ  ಒಂದು ಕೋಟಿ ಸಸಿಗಳನ್ನು ನೆಡುವ ಯೋಜನೆ ರೂಪಿಸಿದೆ ಎಂದರು. ಈ ಸಂದರ್ಭ ಮಾಜಿ ಸಚಿವರಾದ ಸುರೇಶ್ ಕುಮಾರ್, ಎಸ್.ಎ.ರಾಮದಾಸ್, ಗವಿಮಠದ ಸ್ವಾಮೀಜಿಗಳು, ಕಾರ್ಪೋರೇಟರ್ ಮಂಜು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: