ಮೈಸೂರು

ಅಕ್ರಮ ಬಂಧನ ಆರೋಪ: ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕೇಸು ದಾಖಲಿಸಲು ನ್ಯಾಯಾಲಯ ಆದೇಶ

ಮೈಸೂರು, ಜು.7: ಅಕ್ರಮ ಬಂಧನ ಆರೋಪದ ಕಾರಣ ಮೈಸೂರಿನ 2 ನೇ ಜೆ.ಎಂ.ಎಫ್.ಸಿ ನ್ಯಾಯಾಲಯವು ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ವಿರುದ್ದ ಕೇಸು ದಾಖಲಿಸಿದೆ.

2013 ರಲ್ಲಿ ಗಂಡ ಹೆಂಡತಿ ಜಗಳಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರಂ ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಕರುಣಾಕರ್ ಎಂಬವರನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದರು. ನ್ಯಾಯಾಧೀಶರ ಗಮನಕ್ಕೂ ತಾರದೆ, ಅನುಮತಿ ಪಡೆಯದೆ ಎಫ್.ಐ.ಆರ್. ದಾಖಲಿಸಿದ್ದರು. ಕರುಣಾಕರ್ ಅವರನ್ನು ಒಂದು ದಿನ ಬಂಧನದಲ್ಲಿರಿಸಲಾಗಿತ್ತು.ನಂತರ  ಕರುಣಾಕರ್ ನ್ಯಾಯಾಲಯದಲ್ಲಿ  ಶ್ರೀನಿವಾಸ್ ವಿರುದ್ಧ ಕೇಸ್ ದಾಖಲಿಸಿದ್ದರು.

ಸದ್ಯ ಬಡ್ತಿ ಪಡೆದು ಜಲಪುರಿ ಪೊಲೀಸ್ ತರಬೇತಿ ಶಾಲೆಯಲ್ಲಿ  ಪೊಲೀಸ್ ಇನ್ಸ್ ಪೆಕ್ಟರ್ ಆಗಿರುವ ಶ್ರೀನಿವಾಸ್ ವಿರುದ್ಧ ಐಪಿಸಿ ಸೆಕ್ಷನ್ 342, ಕರ್ನಾಟಕ ಪೊಲೀಸ್ ಆ್ಯಕ್ಟ್ 151 , 152ರ  ಪ್ರಕಾರ ಕೇಸ್ ದಾಖಲಿಸಲು ನ್ಯಾಯಾಲಯ ಆದೇಶ ನೀಡಿದೆ. ಸದ್ಯ ಪಿಐ  ಶ್ರೀನಿವಾಸ್ ಬಂಧನ ಭೀತಿಯಲ್ಲಿದ್ದಾರೆ. (ವರದಿ: ಆರ್.ವಿ, ಎಲ್.ಜಿ)

Leave a Reply

comments

Related Articles

error: