ಮೈಸೂರು

ಶಿಕ್ಷಣದ ಗುಣಮಟ್ಟ ತಿಳಿಯಲು ಸರ್ವೆ: ಶಿಕ್ಷಕರಿಗೆ ಮೂರು ದಿನಗಳ ಕಾರ್ಯಾಗಾರ

ಮೈಸೂರು, ಜು.7: ಶಾಲಾ ಶಿಕ್ಷಣದ ಗುಣಮಟ್ಟ ಹಾಗೂ ಮಕ್ಕಳ ಕಲಿಕಾ ಸಾಮರ್ಥ್ಯಗಳನ್ನು ತಿಳಿಯುವ ಸಲುವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಸರ್ವೆ ಆಯೋಜಿಸಿದ್ದು ಅದರ ಅಂಗವಾಗಿ ಜು.10, 11 ಹಾಗೂ 12ರಂದು ಶಿಕ್ಷಕರಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪ್ರಾದೇಶಿಕ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ವೈ.ಶ್ರೀಕಾಂತ್ ತಿಳಿಸಿದರು.

ಶುಕ್ರವಾರ ಪ್ರಾದೇಶಿಕ ಶಿಕ್ಷಣ ಕೇಂದ್ರದ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್ ಸಿಇಆರ್ ಟಿ ವತಿಯಿಂದ ಶಿಕ್ಷಣ ಗುಣಮಟ್ಟವನ್ನು ತಿಳಿಯುವ ಸಲುವಾಗಿ ಸರ್ವೆ ನಡೆಸಲಾಗುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ 5ನೇ ಸರ್ವೆ ನಡೆಯಲಿದೆ. ಸರ್ವೆಗೆ ಆಯ್ಕೆಯಾದ ಶಿಕ್ಷಕರಿಗೆ ಮಕ್ಕಳ ಕಲಿಕಾ ಮಟ್ಟ, ಸಾಮರ್ಥ್ಯ, ಸೇರಿದಂತೆ ಕಲಿಕೆಗೆ ಸಂಬಂಧಿಸಿದ ಅಂಶಗಳ ಕುರಿತು ಮೂರು ದಿನಗಳ ಕಾರ್ಯಾಗಾರವನ್ನು ಜು.10ರಿಂದ 12ರವರೆಗೆ ಆಯೋಜಿಸಲಾಗಿದೆ. ಈ ಸರ್ವೆಯಿಂದ ಶಿಕ್ಷಣದ ಗುಣಮಟ್ಟ ತಿಳಿಯಲಿದ್ದು, ಕಲಿಕೆಯನ್ನು ಹೇಗೆ ಮತ್ತಷ್ಟು ಉತ್ತಮಪಡಿಸಬಹುದು, ಯಾವ ಕ್ಷೇತ್ರದಲ್ಲಿ ಬದಲಾವಣೆ ಮಾಡಬೇಕು. ಸೇರಿದಂತೆ ಉತ್ತಮ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಅಂಶಗಳನ್ನು ತಿಳಿದುಕೊಳ್ಳಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: