ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಳಚರಂಡಿ, ಕುಡಿಯುವ ನೀರಿನ ಕಡೆ ಗಮನ ನೀಡಿದೆ : ಸಿಎಂ ಸಿದ್ದರಾಮಯ್ಯ

ರಾಜ್ಯ( ಬೆಂಗಳೂರು)ಜು.7:-ಬೆಂಗಳೂರು ಜಲಮಂಡಳಿ ವತಿಯಿಂದ ನಿರ್ಮಿಸಲಾದ  ಚಿಕ್ಕಬಾಣಾವರ, ನಾಗಸಂದ್ರ, ರಾಜಾ ಕೆನಾಲ್’ನಲ್ಲಿ ಒಟ್ಟು 65 ಎಂ ಎಲ್ ಡಿ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣ ಘಟಕವನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು ತ್ಯಾಜ್ಯ ನೀರು ಸಂಸ್ಕರಣೆ ಆಗದೆ ಹೋದರೆ ಹಲವು ರೋಗ ರುಜಿನಗಳಿಗೆ ದಾರಿಯಾಗಲಿದೆ. ಬೆಳ್ಳಂದೂರು ಕೆರೆಯಲ್ಲಿ ಈಗ ಆಗಿರುವ ಅನಾಹುತ ಕೂಡ ಕಣ್ಮುಂದೆ  ಇದೆ. ಸಾರ್ವಜನಿಕರಿಂದ ಟೀಕೆಗೂ ಗುರಿ ಆಗುತ್ತಿದೆ. ಹಿಂದೆ ಇದ್ದ ಸರ್ಕಾರ ಇವುಗಳ ಕಡೆ ಗಮನ ನೀಡಿರಲಿಲ್ಲ. ರಾಜಕೀಯದ ಕಾರಣಕ್ಕೆ ಕುಮಾರಸ್ವಾಮಿಯವರು 110 ಹತ್ತು ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿದರು. ಸೇರಿಸಿದ್ದು ಮಾತ್ರ. ಅಭಿವೃದ್ಧಿ ಮಾಡಲಿಲ್ಲ. ನಮ್ಮ‌ ಸರ್ಕಾರ ಬಂದ ಮೇಲೆ‌ ಒಳಚರಂಡಿ, ಕುಡಿಯುವ ನೀರಿನ ಕಡೆ ಗಮನ ಕೊಟ್ಟಿದ್ದೇವೆ ಎಂದರು. ಮುಂದಿನ ಬಾರಿ ಮತ್ತೆ ನಮ್ಮದೆ ಸರ್ಕಾರ ಬರಲಿದೆ. ಬಿಜೆಪಿಯವರು ಈಗ ಸೈಲೆಂಟ್ ಆಗಿದ್ದಾರೆ. ಅವರಿಗೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವುದು ತಿಳಿದಿದೆ ಎಂದರು.

ಕಾರ್ಯಕ್ರಮದಲ್ಲಿ‌ ಬೆಂಗಳೂರು ನಗರಾಭಿವೃದ್ಧಿ ಸಚಿವ ಜಾರ್ಜ್, ಸ್ಥಳಿಯ ಶಾಸಕ ಬೈರತಿ ಬಸವರಾಜ್, ಶಾಸಕ ಎಸ್ ಟಿ ಸೋಮಶೇಖರ್, ಮೇಯರ್ ಪದ್ಮಾವತಿ ಸೇರಿದಂತೆ ಜಲಮಂಡಳಿ ಅಧಿಕಾರಿಗಳು ಪಾಲ್ಗೊಂಡಿದ್ದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: