ಕರ್ನಾಟಕ

ಚರಂಡಿ ಅವ್ಯವಸ್ಥೆ: ದೂರು ನೀಡಿದರೂ ಗಮನ ಹರಿಸದ ಪಾಲಿಕೆ ಆಯುಕ್ತರು

ಚಾಮರಾಜನಗರ, ಜು.7: ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಪ್ರಕರಣದಲ್ಲಿ ಸಾರ್ವಜನಿಕರ ಪಾತ್ರವೂ ಮಹತ್ವದ್ದಾಗಿದ್ದು, ಈಗ ಅವರ ನಿರ್ಲಕ್ಷ್ಯತನ ಹೆಚ್ಚಾಗಿದೆ.

ಚಾಮರಾಜನಗರ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸುರಕ್ಷಿತವಾಗಿ ಚರಂಡಿ ಇಲ್ಲದೆ ಅಲ್ಲಲ್ಲಿ ನೀರು ತುಂಬಿ ಗಬ್ಬೇರುತ್ತಿದೆ.  ಇಲ್ಲಿನ ಕೊಳೆ ನೀರಿನ ಗುಂಡಿ ಸೊಳ್ಳೆಗಳ ಆವಾಸ ಸ್ಥಾನವಾಗಿದೆ‌. ಇದಕ್ಕೆ ನಗರಸಭಾ ಸದಸ್ಯರ ನಿರ್ಲಕ್ಷ್ಯ ಕೂಡ ಪ್ರಮುಖವಾಗಿದೆ. ಕೊಳಚೆ ನೀರು ತೆಗೆದು ಚರಂಡಿ ಮಾಡಿಕೊಡಲು ಅಧಿಕಾರಿ ವರ್ಗದವರೋರ್ವರು ದೂರು ಕೊಟ್ಟರೂ‌  ನಗರ ಸಭಾ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಬಹುತೇಕ ಕಡೆ ನೀರಿನ ಪೈಪು ಒಡೆದು ಹೋಗಿದ್ದು ಕೆಲವು ಮನೆಯ ಗಲೀಜು ನೀರು ಕುಡಿಯುವ ನೀರಿನ ಪೈಪಿಗೆ ಸೇರುತ್ತಿದೆ. ಪ್ರಮುಖ ಭಾಗಗಳಲ್ಲಿ ಇಂತಹ ಸ್ಥಿತಿ ಎದುರಾಗಿದ್ದು, ಅದರ ಸುತ್ತ-ಮುತ್ತಲ ಜನರು ಭಯಭೀತರಾಗಿದ್ದಾರೆ.

ಆಯುಕ್ತರಿಂದ ನೋ ರೆಸ್ಪಾನ್ಸ್

ದಿನೇ  ದಿನೇ ಹೆಚ್ಚಾಗುತ್ತಿರುವ ರೋಗಗಳು , ಸಮಸ್ಯೆಗಳ‌ ಬಗ್ಗೆ‌ ಸಾರ್ವಜನಿಕರು ದೂರು ಇಟ್ಟರೂ ಕ್ಯಾರೆ ಎನ್ನುತ್ತಿಲ್ಲ. ನೂರಾರು ಜನರು ಆಯುಕ್ತರ ವಾಟ್ಸಾಪ್ ಗೆ ಚಿತ್ರ ಕಳಿಸಿದರೂ ಮೌನವಾಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಫೋನ್ – ಇನ್ ಕಾರ್ಯಕ್ರಮದಲ್ಲಿ ನಿವಾಸಿಗಳು ದೂರಿತ್ತರೂ  ಕೂಡ ಗಮನ ಹರಿಸಿಲ್ಲ ಎಂದರೆ ಅಧಿಕಾರಿ‌ಷಾಹಿಗೆ ಹಿಡಿದ ಕೈಗನ್ನಡಿಯಲ್ಲವೆ.? ಎಂಬುದು ಸ್ಪಷ್ಟವಾಗುತ್ತಿದೆ. (ವರದಿ: ಆರ್.ವಿ. ಎಸ್, ಎಲ್.ಜಿ)

Leave a Reply

comments

Related Articles

error: