ಕರ್ನಾಟಕಪ್ರಮುಖ ಸುದ್ದಿ

ಸೂಟ್ ಕೇಸ್ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ : ಮಧು ಬಂಗಾರಪ್ಪ ಸ್ಪಷ್ಟನೆ

ರಾಜ್ಯ(ಯಾದಗಿರಿ)ಜು.7:- ಪ್ರಜ್ವಲ್ ರೇವಣ್ಣ ಸೂಟ್ ಕೇಸ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗುರುಮಠಕಲ್’ನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ  ಮಧು ಬಂಗಾರಪ್ಪ  ಸೂಟ್ ಕೇಸ್ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್’ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದ್ದರೆ ಫಲಿತಾಂಶ ಬೇರೆಯದೇ ಬರುತ್ತಿತ್ತು. ಅದು ಖಾಲಿ ಸೂಟ್ ಕೇಸೋ, ಯಾವ ಸೂಟ್ ಕೇಸೋ ಗೊತ್ತಿಲ್ಲ. ಸೂಟ್ ಕೇಸ್ ಬಗ್ಗೆ ಆವೇಶದಲ್ಲಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಸೂಟ್ ಕೇಸ್ ವಿಚಾರವಾಗಿ ಸ್ಪಷ್ಟನೆ ನೀಡುವಂತೆ ಹೇಳಿದ್ದೇನೆ. ಜೆಡಿಎಸ್’ನಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು.ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ನಾಯಕರಿಗೆ  ಮನವಿ ಮಾಡಿದ್ದೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: