ಕರ್ನಾಟಕಪ್ರಮುಖ ಸುದ್ದಿ

ವ್ಯಾಪಾರಾಭಿವೃದ್ಧಿ ಹಾಗೂ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ : ಕಲ್ ರಾಜ್ ಮಿಶ್ರ

ರಾಜ್ಯ(ಬೆಂಗಳೂರು)ಜು.7:-ಕೇಂದ್ರ ಸರ್ಕಾರ ವ್ಯಾಪಾರಾಭಿವೃದ್ಧಿ ಹಾಗೂ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಕೇಂದ್ರ ಸಚಿವ ಕಲ್ ರಾಜ್ ಮಿಶ್ರ  ತಿಳಿಸಿದರು.
ಕೆ.ಆರ್.ಪುರಂ ನ ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್‌ನ ಕೆಟಿಪಿಒದಲ್ಲಿ ಏರ್ಪಡಿಸಿದ್ದ 7ನೇ ಇಂಡಿಯನ್ ಸ್ಟೇನ್ ಲೆಸ್ ಸ್ಟೀಲ್ ಹೌಸ್ ವೇರ್ ಮೇಳ – 2017 ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾಗೆ ಹೆಚ್ಚು ಒತ್ತು ನೀಡುತ್ತಿದೆ.
ಈ ಮೂಲಕ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ದಿಟ್ಟಹೆಜ್ಜೆ ಇಡುತ್ತಿದೆ ಎಂದರು. ಈಗಾಗಲೇ ಸಣ್ಣ ಕೈಗಾರಿಕೆಗಳ ನೋಂದಣಿಗೆ ಕಂಪ್ಯೂಟರೀಕರಣ ಮಾಡಲಾಗಿದ್ದು, ಆನ್ ಲೈನ್‌ನಲ್ಲೇ ಸಂಸ್ಥೆಗಳ ನೋಂದಣಿ ಮಾಡಲಾಗುತ್ತದೆ. ಅಲ್ಲದೆ 2 ಕೋಟಿ ರೂ. ಯಾವುದೇ ರೀತಿಯ ಗ್ಯಾರಂಟಿ ಇಲ್ಲದೆ ಹೊಸ ಸಂಸ್ಥೆಗಳ ಸ್ಥಾಪನೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ಮೇಕ್ ಇನ್ ಇಂಡಿಯಾ ಮತ್ತಷ್ಟು ಬಲಿಷ್ಟಗೊಳ್ಳಲಿದೆ ಎಂದು ತಿಳಿಸಿದರು. ಈಗಾಗಲೇ ದೊಡ್ಡ ಕಾರ್ಖಾನೆಗಳು ಶೇ. 20 ರಷ್ಟು ಉತ್ಪನ್ನಗಳನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ ಪಡೆದುಕೊಳ್ಳುವಂತೆ ಸರ್ಕಾರ ಯೋಜನೆ ರೂಪಿಸಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಸಹ ಆಗಲಿದೆ ಎಂದು ಹೇಳಿದರು.
ಈಗಾಗಲೇ ಮಾನವ ಸಂಪನ್ಮೂಲ ಹೆಚ್ಚಿಸಲು 18 ಟೆಕ್ನಾಲಜಿ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರಂತೆ 2,200 ಕೋಟಿ ರೂ. ವೆಚ್ಚದಲ್ಲಿ ಇನ್ನೂ 15 ಸೆಂಟರ್‌ಗಳನ್ನು ಪ್ರಾರಂಭಿಸಲಾಗುವುದು. ಇದರಿಂದ 1.5 ಲಕ್ಷ ಮಂದಿಗೆ ಉಪಯೋಗವಾಗಲಿದೆ ಎಂದು  ತಿಳಿಸಿದರು. ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಝಡ್ ಎಂಬ ಸರ್ಟಿಫಿಕೆಟ್ ನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗುತ್ತಿದೆ. ಇದರಿಂದ ಗುಣಮಟ್ಟದ ಬಗ್ಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ತಿಳಿಸಿದರು. ಈ ಮೇಳದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿದ್ದು, ಜಪಾನ್, ಥೈವಾನ್, ಜರ್ಮನ್, ಚೀನಾ ಸೇರಿದಂತೆ, ವಿವಿಧ ರಾಷ್ಟ್ರಗಳ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಎಂ.ಇ. ರಾಷ್ಟ್ರೀಯ ಕೋ ಕನ್ವೀನಿಯನ್ ಎಸ್. ಪ್ರಕಾಶ್, ರೀಟೇಲ್ ಸ್ಟೇನ್ ಲೆಸ್ ಸ್ಟೀಲ್ ಸಮೂಹದ ಅಧ್ಯಕ್ಷ ಭೀಮ್ ಸಿಂಗ್, ಉಪಾಧ್ಯಕ್ಷ ಜಗನ್ನಾಥ್, ಕಾರ್ಯದರ್ಶಿ ಉತ್ತಮ್ ಚಂದ್, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: