ಸುದ್ದಿ ಸಂಕ್ಷಿಪ್ತ

ನಟರಾಜ ಕಾಲೇಜಿನ ಸ್ನೇಹ ಸಿಂಚನ : ಪ್ರತಿಭಾ ಪುರಸ್ಕಾರ

ಮೈಸೂರು.ಜು.7 : ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನ ಸ್ನೇಹ ಸಿಂಚನ – ಪ್ರತಿಭಾ ಪುರಸ್ಕಾರವನ್ನು ಜು.8ರ ಬೆಳಿಗ್ಗೆ 10ಕ್ಕೆ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಲಾಗಿದೆ.

ನಾಲ್ಕನೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಂ ಜ್ಯೋತಿ ಪಾಟೀಲ್ ಉದ್ಘಾಟಿಸುವರು. ಶಾಸಕ ಎಂ.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಶ್ರೀನಟರಾಜ ಪ್ರತಿಷ್ಠಾನದ ಶ್ರೀಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ಮಾನಸಗಂಗೋತ್ರಿಯ ಸಹ ಪ್ರಾಧ್ಯಾಪಕ ಡಾ.ಹೆಚ್.ಎಸ್. ನಾಗೇಂದ್ರ ಸ್ವಾಮಿ ಹಾಗೂ ಪ್ರಾಂಶುಪಾಲ ಜಿ.ಪ್ರಸಾದ ಮೂರ್ತಿ ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: