ಮನರಂಜನೆ

ಅಕ್ಟೋಬರ್ 6ರಂದು ನಾಗಚೈತನ್ಯ-ಸಮಂತಾ ಮದುವೆ ಫಿಕ್ಸ್

ಹೈದ್ರಾಬಾದ್, ಜುಲೈ.7 :- ಟಾಲಿವುಡ್`ನ ಲವ್ ಬರ್ಡ್` ಎಂದೇ ಫೇಮಸ್‍  ಆಗಿರುವ  ನಾಗಚೈತನ್ಯ ಮತ್ತು ಸಮಂತಾ ಮದುವೆ ದಿನಾಂಕ ಫಿಕ್ಸ್ ಆಗಿದೆ.
ಹಲವು ವರ್ಷಗಳಿಂದ ಪ್ರೀತಿಯ ದೋಣಿಯಲ್ಲಿ  ಸಾಗುತ್ತಿದ್ದ ನಾಗಚೈತನ್ಯ ಮತ್ತು ಸಮಂತಾ ಮದುವೆಗೆ ತಂದೆ ನಾಗಾರ್ಜುನ್‍ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.  ಅಕ್ಟೋಬರ್ 6ರಂದು ಗೋವಾದಲ್ಲಿ ಮೂರು ದಿನ ಮದುವೆ ಕಾರ್ಯಕ್ರಮ ನೆರವೇರಲಿದೆ. ಹಿಂದೂ ಮತ್ತು  ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆಯಲಿದೆ.  ನಾಗಚೈತನ್ಯ ಸದ್ಯ `ಯುದ್ಧಂ ಶರಣಂ’ ಚಿತ್ರದ ಶೂಟಿಂಗ್`ನಲ್ಲಿ , ಸಮಂತಾ ರಾಮಚರಣ್ ಜೊತೆ  ರಂಗಸ್ಥಳಂ ಚಿತ್ರದ ಶೂಟಿಂಗ್`ನಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ ವೇಳೆಗೆ ಇಬ್ಬರೂ ತಮ್ಮೆಲ್ಲ ಕೆಲಸ ಮುಗಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಮದುವೆ ಬಳಿಕ ನಾಗಚೈತನ್ಯ ಮತ್ತು ಸಮಂತಾ 40 ದಿನಗಳ ಕಾಲ ವಿದೇಶಕ್ಕೆ ಹನಿಮೂನ್`ಗೆ ತೆರಳುತ್ತಿದ್ದಾರೆ. ಹೀಗಾಗಿ, ಯಾವುದೇ ಸಿನಿಮಾಗೆ ತಾರಾಜೋಡಿ ಸಹಿ ಹಾಕುತ್ತಿಲ್ಲ. ನವೆಂಬರ್ ಕೊನೆ ವಾರದಲ್ಲಿ ಭಾರತಕ್ಕೆ ವಾಪಸ್ ಆಗಲಿದ್ದಾರೆ. (ಪಿ.ಜೆ)

Leave a Reply

comments

Related Articles

error: