ಕರ್ನಾಟಕ

ಹಿರಿಯ ಕಲಾವಿದರುಗಳಿಂದ ಕಲಾಶಿಬಿರ ನಡೆಸಲು ಅರ್ಜಿ ಆಹ್ವಾನ

ಮಂಡ್ಯ, ಜುಲೈ7 : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಿಂದ 2017-18ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಪರಿಶಿಷ್ಟ ವರ್ಗದ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಯಕ್ಷಗಾನ ಮತ್ತು ಬಯಲಾಟ ಇತ್ಯಾದಿ ಕಲಾಪ್ರಕಾರಗಳಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದರುಗಳಿಂದ ಕಲಾಶಿಬಿರ ನಡೆಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತರಬೇತಿ ನೀಡಲು ಆಸಕ್ತಿ ಇರುವ ಕಲಾವಿದರುಗಳು ಅರ್ಜಿಗಳನ್ನು ಮಂಡ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ ರಸ್ತೆ ಬೆಂಗಳೂರು-02 ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಕಾಡೆಮಿ ಕಛೇರಿ ದೂರವಾಣಿ ಸಂಖ್ಯೆ:080-22113146 ಅನ್ನು ಸಂಪರ್ಕಿಸಬಹುದು.
-ಎನ್.ಬಿ.

Leave a Reply

comments

Related Articles

error: