Uncategorizedಪ್ರಮುಖ ಸುದ್ದಿ

ನಕಲಿ ದಾಖಲೆ ನೀಡಿ ಲಕ್ಷಾಂತರ ರೂ ವಂಚನೆ: ಇಬ್ಬರ ಬಂಧನ

ಪ್ರಮುಖ ಸುದ್ದಿ, ಬೆಂಗಳೂರು, ಜು.7: ನಕಲಿ ದಾಖಲೆಗಳನ್ನು ನೀಡಿ ಕ್ರೆಡಿಟ್ ಕಾರ್ಡ್ ಪಡೆದು ಸುಮಾರು 50 ಲಕ್ಷ ರೂ ವಂಚಿಸಿದ ಇಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ನೀರನ್ ಜಯಪಾಲ್(37) ಅಬುಬಕರ್(39) ಬಂಧಿತ ಆರೋಪಿಗಳು. ಆರೋಪಿಗಳು ಮೂರು ಬ್ಯಾಂಕ್ ಗಳಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಕಲಿ ವೋಟರ್ ಐಡಿ ಕಾರ್ಡ್, ನಕಲಿ ಚಾಲನಾ ಪರವಾನಗಿ, ಪ್ರತಿಷ್ಠಿತ ಕಂಪನಿಗಳ ಆಫರ್ ಲೇಟರ್ ಗಳನ್ನು ನೀಡಿ ಪಾನ್ ಕಾರ್ಡ್ ಪಡೆದು ಬಳಿಕ ಅದನ್ನು ಬ್ಯಾಂಕ್ ಗೆ ನೀಡಿ ಖಾತೆ ತೆರೆಯುತ್ತಿದ್ದರು. ನಂತರ ಕ್ರೆಡಿಟ್ ಕಾರ್ಡ್ ಪಡೆದು ಬ್ಯಾಂಕ್ ಗಳಿಗೆ ಲಕ್ಷಾಂತರ ರೂ ವಂಚಿಸಿದ್ದಾರೆ.

ಕ್ರೆಡಿಟ್ ಕಾರ್ಡ್ ನಿಂದ ಚಿನ್ನ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿ ಬಳಿಕ ಅವುಗಳನ್ನು ಒಎಲ್ ಎಕ್ಸ್ ನಲ್ಲಿ ಕಡಿಮೆ ಬೆಲೆಗೆ ಮಾರುತ್ತಿದ್ದರು. ಬಂಧಿತರಿಂದ ಒಂದು ಕಾರು, ಒಂದು ಬೈಕ್ ಹಾಗೂ ಒಂದು ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: