ಸುದ್ದಿ ಸಂಕ್ಷಿಪ್ತ

ವೃತ್ತಿನಿರತ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

ಮಡಿಕೇರಿ ಜು.07:-ಜಿಲ್ಲೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಕ ವೃತ್ತಿನಿರತ ಕುಶಲಕರ್ಮಿಗಳಿಗೆ ವೃತ್ತಿ ಮುಂದುವರೆಸಲು ಮತ್ತು ವಾಸಿಸಲು ಅನುಕೂಲವಾಗುವಂತೆ, 2017-18 ನೇ ಸಾಲಿನಲ್ಲಿ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದ ಮುಖಾಂತರ ವೈಯಕ್ತಿಕ ವಸತಿ ಮತ್ತು ಕಾರ್ಯಗಾರವನ್ನು ತಲಾ ರೂ.2.50 ಲಕ್ಷಗಳ ಯೋಜನಾ ವೆಚ್ಚದಲ್ಲಿ 3 ಚದರ ಆರ್.ಸಿ.ಸಿ ಅಥವಾ 4 ಚದರ ಶೀಟಿನ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಇದರಲ್ಲಿ ರೂ. 2.20 ಲಕ್ಷ ಸರ್ಕಾರದಿಂದ ನೀಡಲಾಗುವುದು. ಉಳಿಕೆ ರೂ. 30 ಸಾವಿರಗಳನ್ನು ಫಲಾನುಭವಿ ಆಯ್ಕೆಯಾದ ಕೂಡಲೇ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಇವರ ಖಾತೆಗೆ ಮುಂಗಡವಾಗಿ ನೀಡಬೇಕಾಗಿದೆ.

ಈ ಯೋಜನೆಯಡಿ ಸ್ವಂತ ನಿವೇಶನ ಹೊಂದಿರುವ  ಮತ್ತು ಗುಡಿಸಲು/ ಶಿಥಿಲಗೊಂಡಿರುವ ಮನೆಯನ್ನು ಹೊಂದಿರುವ ವೃತ್ತಿ ನಿರತ ಕುಶಲಕರ್ಮಿಗಳು ಮಾತ್ರ ಅರ್ಜಿಯನ್ನು ಜುಲೈ 30 ರೊಳಗೆ ಎಲ್ಲಾ ದಾಖಲೆಗಳೊಂದಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಡಗು ಜಿಲ್ಲೆ, ಮಡಿಕೇರಿಗೆ ಸಲ್ಲಿಸುವುದು. ಇದು 2 ನೇ ಕರೆಯಾಗಿದೆ. ಅರ್ಜಿ ನಮೂನೆಗಳು ನೀಡಬೇಕಾದ ದಾಖಲೆಗಳು ಹಾಗೂ ಹೆಚ್ಚಿನ ವಿವರಗಳಿಗೆ ಕಚೇರಿ ವೇಳೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ದೂರವಾಣಿ ಸಂಖ್ಯೆ: 08272-228431 ಸಂಪರ್ಕಿಸಬಹುದಾಗಿದೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: